ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತೆ ಅನ್ನೋದು ನಿಜಾನಾ?
By Raghavendra M Y
Jul 14, 2024
Hindustan Times
Kannada
ಕೃಷಿ ಪ್ರಧಾನ ದೇಶವಾಗಿರುವ ಭಾರತಕ್ಕೆ ಸಕಾಲಿಕ ಮಳೆ ಬಹಳ ಮುಖ್ಯ. ನಮ್ಮ ದೇಶದಲ್ಲಿ ಮಳೆ ಬಾರದೆ ಇದ್ದಾಗ ಜನ ಕೆಲವು ತಂತ್ರಗಳನ್ನು ಅನುಸರಿಸುತ್ತಾರೆ
ಮಳೆ ಬಾರದಿದ್ದಾಗ ದೇಶದ ವಿವಿಧೆಡೆ ಜನರು ತಮ್ಮದೇ ಆದ ಕ್ರಮಗಳನ್ನ ಅನುಸರಿಸುತ್ತಾರೆ. ಕೆಲವೆಡೆ ಮಳೆಗಾಗಿ 2 ಕಪ್ಪೆಗಳಿಗೆ ಮದುವೆ ಮಾಡಿಸುತ್ತಾರೆ
ಆದರೆ ಕಪ್ಪೆಗಳಿಗೆ ಮದುವೆ ಮಾಡಿದರೆ ಮಳೆ ಬರುತ್ತಾ ಎಂಬ ಪ್ರಶ್ನೆಗಳು ಹಲವರ ಮನಸ್ಸಿನಲ್ಲಿ ಮೂಡುತ್ತದೆ. ಇದರ ಬಗ್ಗೆ ಇಲ್ಲಿ ತಿಳಿಯಿರಿ
ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸುವುದು ಜನರ ಒಂದು ನಂಬಿಕೆ ಅಷ್ಟೇ. ಇದಕ್ಕೂ ವಿಜ್ಞಾನಕ್ಕೂ ಸಂಬಂಧ ಇಲ್ಲ
ಭಾರತದ ಕೆಲವು ಪ್ರದೇಶಗಳಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ, ಎರಡು ಕಪ್ಪೆಗಳಿಗೆ ಮದುವೆಯಾದರೆ ಇಂದ್ರನು ಸಂತೋಷಪಡುತ್ತಾನೆ ಎಂಬ ನಂಬಿಕೆ ಇದೆ
ಇಂದ್ರನನ್ನು ಮಳೆಯ ದೇವರೆಂದು ಪರಿಗಣಿಸಲಾಗಿದೆ. ಕಪ್ಪೆಗಳ ಮದುವೆಯಿಂದ ಇಂದ್ರನು ಪ್ರಸನ್ನನಾಗಿ ಆ ಪ್ರದೇಶದಲ್ಲಿ ಮಳೆ ಬೀಳುವಂತೆ ಮಾಡುತ್ತಾನೆ ಎಂದು ಹೇಳಲಾಗುತ್ತದೆ
ಕಪ್ಪೆಗಳ ಮದುವೆ ವೇಳೆ ಹಿಂದೂ ಧರ್ಮದ ಎಲ್ಲಾ ವಿಧಿ ವಿಧಾನಗಳನ್ನು ಮಾಡಲಾಗುತ್ತೆ. ಈ ಸಮಯಲ್ಲಿ ಅತಿಥಿಗಳಿಂದ ನೃತ್ಯ, ಹಾಡುಗಾರಿಕೆ ಊಟದ ವ್ಯವಸ್ಥೆಯೂ ಇರುತ್ತೆ
ಮದುವೆಯ ಬಳಿಕ ಜೋಡಿ ಕಪ್ಪೆಗಳನ್ನು ಕೊಳಕ್ಕೆ ಬಿಡಲಾಗುತ್ತದೆ. ಪ್ರವಾಹ ಪರಿಸ್ಥಿತಿಗೆ ಕಾರಣವಾಗುವ ಜೋರು ಮಳೆಯ ವೇಳೆ ಕಪ್ಪೆಗಳಿಗೆ ವಿಚ್ಛೇದವನ್ನೂ ಕೊಡಿಸಿದ್ದಾರೆ
ಕಪ್ಪೆಗಳಿಗೆ ವಿಚ್ಛೇದನ ಮಾಡಲು ಮೊದಲು ಒಂದೇ ಕಡೆ ಇರುವ ಎರಡು ಕಪ್ಪೆಗಳನ್ನು ಹಿಡಿಯಲಾಗುತ್ತೆ. ನಂತರ ಅವುಗಳನ್ನ ಬೇರೆ ಬೇರೆ ಕೊಳಗಳಿಗೆ ಬಿಡಲಾಗುತ್ತದೆ
ಹೀಗೆ ಮಾಡುವುದರಿಂದ ಮಳೆ ಕಡಿಮೆಯಾಗುತ್ತೆ ಎಂಬ ನಂಬಿಕೆ. ಆದರೆ ಈ ಮ್ಯಾಜಿಕ್‌ಗೂ ವಿಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ