ಪುಷ್ಪ 2 ಸಿನಿಮಾದ ಕಿಸ್ಸಿಕ್‌ ಹಾಡಿಗೆ 2 ಕೋಟಿ ಸಂಭಾವನೆ ಪಡೆದ್ರ ಶ್ರೀಲೀಲಾ

By Praveen Chandra B
Nov 29, 2024

Hindustan Times
Kannada

ಪುಷ್ಪ 2 ಸಿನಿಮಾದ ಕಿಸ್ಸಿಕ್‌ ಹಾಡಿನಲ್ಲಿ ಶ್ರೀಲೀಲಾ ಐಟಂ ಡ್ಯಾನ್ಸ್‌ ಮಾಡಿದ್ದಾರೆ.

ಇದೀಗ ಶ್ರೀಲೀಲಾ ಈ ಹಾಡಿನಲ್ಲಿ ಐಟಂ ಡ್ಯಾನ್ಸ್‌ ಮಾಡಲು ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಚರ್ಚೆಯಾಗುತ್ತಿದೆ.

ಈ ಹಿಂದೆ ಸಮಂತಾ ಅವರು 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು. ಆದರೆ, ಶ್ರೀಲೀಲಾಗೆ ಅದಕ್ಕಿಂತ ಕಡಿಮೆ ಸಂಭಾವನೆ ನೀಡಲಾಗಿದೆ ಎಂದು ಚರ್ಚೆಗಳಾಗುತ್ತಿವೆ.

ಶ್ರೀಲೀಲಾಗೆ ಈ ಹಾಡಿಗೆ 2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ವದಂತಿಗಳಿವೆ. ಇದೀಗ ಈ ಪ್ರಶ್ನೆಗೆ ಶ್ರೀಲೀಲಾ ಉತ್ತರಿಸಿದ್ದಾರೆ.

ನಾವಿನ್ನೂ ಈ ಹಾಡಿನ ಸಂಭಾವನೆ ಕುರಿತು ನಿರ್ಮಾಪಕರ ಜತೆ ಮಾತನಾಡಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಇದೇ ಡಿಸೆಂಬರ್‌ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 

"ಕಿಸ್ಸಿಕ್ ನಿಮ್ಮ ಸರಾಸರಿ ಐಟಂ ಸಾಂಗ್ ಅಲ್ಲ. ಈಗ ಸಾಕಷ್ಟು ಮರೆ ಮಾಡಲಾಗಿದೆ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಡಿಸೆಂಬರ್‌ 5ರಂದು ನೀವು ನನ್ನನ್ನು ಮತ್ತು ಅಲ್ಲು ಅರ್ಜುನ್‌ ಅವರನ್ನು ಜತೆಯಾಗಿ ನೋಡಿದ ಬಳಿಕ ಉತ್ತರಿಸಲಾಗುವುದು"  ಎಂದು ಶ್ರೀಲೀಲಾ ಹೇಳಿದ್ದಾರೆ.

ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ

AFP