'ಚೆಂದುಳ್ಳಿ ಚೆಲುವೆ' 'ನ್ಯಾಷನಲ್ ಕ್ರಶ್' ಕಾವ್ಯಾ ಮಾರನ್ ನೂರಾರು ಕೋಟಿಗೆ ಒಡತಿ; ಎಷ್ಟಿದೆ ನೋಡಿ
By Prasanna Kumar P N Apr 04, 2024
Hindustan Times Kannada
ಸನ್ರೈಸರ್ಸ್ ಹೈದರಾಬಾದ್ ಪ್ರತಿ ಪಂದ್ಯದ ವೇಳೆ ಹಾಜರಿರುವ ಫ್ರಾಂಚೈಸಿ ಒಡತಿ ಕಾವ್ಯಾ ಮಾರನ್, ಪ್ರಸ್ತುತ ನ್ಯಾಷನಲ್ ಕ್ರಷ್ ಆಗಿ ಹೊರಹೊಮ್ಮಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ಮಾಲೀಕರಾದ ಕಾವ್ಯಾ, ಕುಣಿದು ಕುಪ್ಪಳಿಸಿದರು. ವಿಡಿಯೋ ಮತ್ತು ಫೋಟೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಪಂದ್ಯಗಳ ಅವಧಿಯಲ್ಲಿ ವಿಶೇಷ ಸಂಭ್ರಮದ ಮೂಲಕ ಹೃದಯ ಗೆದ್ದಿರುವ ಕಾವ್ಯಾ ಸಂಪತ್ತು ನೂರಾರು ಕೋಟಿ ಎಂಬುದು ವಿಶೇಷ. ಸದ್ಯ ಗೂಗಲ್ನಲ್ಲಿ ಆಕೆಯ ಆಸ್ತಿ ಮೌಲ್ಯದ ಕುರಿತು ಹೆಚ್ಚು ಸರ್ಚ್ ಮಾಡಲಾಗುತ್ತಿದೆ.
ಸ್ಟ್ಯಾಂಡ್‌ನಲ್ಲಿ ತಮ್ಮ ಮಿಲಿಯನ್ ಡಾಲರ್ ಸ್ಮೈಲ್‌ನೊಂದಿಗೆ ಆರೆಂಜ್ ಆರ್ಮಿಯನ್ನು ಬೆಂಬಲಿಸುವ ಕಲಾನಿಧಿ ಮಾರನ್ ಪುತ್ರಿ ಕಾವ್ಯಾ ಬಗ್ಗೆ ನೀವು ತಿಳಿಯಬೇಕಾದ ಮಾಹಿತಿ ಇಲ್ಲಿದೆ.
ಕ್ರಿಕೆಟ್ ಜತೆಗೆ ಸನ್ ಟಿವಿ ನೆಟ್‌ವರ್ಕ್‌ನಲ್ಲೂ ನಿರ್ಣಾಯಕ ಪಾತ್ರ ವಹಿಸುವ ಕಾವ್ಯಾ, ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಿಂದ ವಾಣಿಜ್ಯ ಪದವಿ ಮತ್ತು ಯುಕೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
1992ರ ಆಗಸ್ಟ್ 6ರಂದು ಚೆನ್ನೈನಲ್ಲಿ ಕಲಾನಿಧಿ ಮತ್ತು ಕಾವೇರಿ ಮಾರನ್ ದಂಪತಿಗೆ ಜನಿಸಿದ ಕಾವ್ಯಾ, ತನ್ನ ಕುಟುಂಬದ ಸಂಪತ್ತನ್ನು ಮಾತ್ರವಲ್ಲದೆ ತಮಿಳುನಾಡಿನಲ್ಲಿ ಆಳವಾಗಿ ಬೇರೂರಿರುವ ರಾಜಕೀಯ ಪರಂಪರೆಯನ್ನೂ ಸಹ ಪಡೆದಿದ್ದಾರೆ.
ಆಕೆಯ ತಾಯಿ ಕಾವೇರಿ ಮಾರನ್, ಸೋಲಾರ್ ಟಿವಿ ಕಮ್ಯುನಿಟಿ ಲಿಮಿಟೆಡ್‌ನ ಸಿಇಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿಗಳಲ್ಲಿ ಒಬ್ಬರು.
ಕಾವ್ಯ ಅವರ ತಾತ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮುತ್ತುವೇಲ್ ಕರುಣಾನಿಧಿ. ಈಕೆ ನೂರಾರು ಕೋಟಿಯ ಆಸ್ತಿಯನ್ನು ಹೊಂದಿದ್ದಾರೆ.
ಜನ್ ಭಾರತ್ ಟೈಮ್ಸ್ ಪ್ರಕಾರ, ಕಾವ್ಯಾ ನಿವ್ವಳ ಮೌಲ್ಯವು ಸುಮಾರು 50 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ 409 ಕೋಟಿ ಎಂದು ಅಂದಾಜಿಸಲಾಗಿದೆ.
WWE: ರಸ್ಲಿಂಗ್ ದೈತ್ಯ ಅಂಡರ್‌ಟೇಕರ್ ಬಾಸ್ಕೆಟ್‌ಬಾಲ್ ಆಟಗಾರ