ಕೂದಲು ಅತಿಯಾಗಿ ಉದುರಿ, ಬೊಕ್ಕತಲೆಯಾಗುವುದನ್ನು ತಡೆಯಲು ಇಲ್ಲಿದೆ 5 ಟಿಪ್ಸ್‌ 

By Reshma
Jun 28, 2024

Hindustan Times
Kannada

ಹಾರ್ಮೋನ್‌ ಅಸಮತೋಲನ, ಸರಿಯಾಗಿ ಕೂದಲಿನ ಆರೈಕೆ ಮಾಡದೇ ಇರುವುದು, ಅಸಮರ್ಪಕ ಆಹಾರಪದ್ಧತಿ ಇಂತಹ ಹಲವು ಅಂಶಗಳು ಅಕಾಲಿಕ ಬೊಕ್ಕತಲೆಗೆ ಕಾರಣವಾಗುತ್ತದೆ. ಇದು ತ್ವರಿತ ಕೂದಲು ಉದುರು ಕಾರಣವಾಗಬಹುದು. 

ಅಕಾಲಿಕವಾಗಿ ಕೂದಲು ಉದುರಲು ಆರಂಭಿಸಿ, ಬೊಕ್ಕತಲೆಯಾಗುವುದನ್ನು ತಪ್ಪಿಸಲು ಇಲ್ಲಿದೆ 5 ಟಿಪ್ಸ್‌. 

ಒತ್ತಡ ನಿರ್ವಹಣೆ 

ಅತಿಯಾದ ಒತ್ತಡವು ಕೂದಲು ಉದುರಲು ಕಾರಣವಾಗುತ್ತದೆ. ಇದು ಅಕಾಲಿಕ ಬೊಕ್ಕ ತಲೆಯನ್ನೂ ಉಂಟು ಮಾಡುತ್ತದೆ. ದೇಹದ ಉರಿಯೂತ ಪ್ರತಿಕ್ರಿಯೆಗಳನ್ನು ಹಿಮ್ಮೆಟ್ಟಿಸಲು ಒತ್ತಡ ನಿರ್ವಹಣೆ ಅತ್ಯಗತ್ಯ. 

ಆರೋಗ್ಯಕರ ಆಹಾರ ಸೇವನೆ 

ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಮತ್ತು ಪೌಷ್ಟಿಕ ಆಹಾರ ಸೇವನೆಯು ಕೂದಲು ಉದುರುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನೆತ್ತಿಯ ಭಾಗಕ್ಕೆ ನಿರ್ಣಾಯಕ ಪೋಷಕಾಂಶಗಳನ್ನು ಪೂರೈಸುತ್ತದೆ. 

ವ್ಯಾಯಾಮ 

ವ್ಯಾಯಾಮವು ಹಾರ್ಮೋನುಗಳ ಸ್ರವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ನೆತ್ತಿಗೆ ರಕ್ತದ ಪೂರೈಕೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. 

ನೆತ್ತಿಗೆ ಮಸಾಜ್‌ ಮಾಡುವುದು 

ತಲೆ ಬೋಳಾಗುವುದು ಮತ್ತು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸಲು ತಲೆಸ್ನಾನಕ್ಕೂ ಮುನ್ನ ವಾರದಲ್ಲಿ ಎರಡು ಬಾರಿ ನೈಸರ್ಗಿಕ ಎಣ್ಣೆಯಿಂದ ನೆತ್ತಿಗೆ ಮಸಾಜ್‌ ಮಾಡಿ. 

ಧೂಮಪಾನ ಮಾಡದಿರಿ 

ಧೂಮಪಾನವು ಕೂದಲು ಉದುರಲು ಪ್ರಮುಖ ಕಾರಣವಾಗಿದೆ. ನಿಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಧೂಮಪಾನ ತ್ಯಜಿಸುವುದು ಬಹಳ ಮುಖ್ಯ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS