Digital Detox: ಸ್ಕ್ರೀನಿಂಗ್‌ ಸಮಯ ಕಡಿಮೆ ಮಾಡಲು 5 ತಂತ್ರಗಳು

By Jayaraj
Jun 14, 2024

Hindustan Times
Kannada

ದಿನವಿಡೀ ಮೊಬೈಲ್‌ ನೋಡುತ್ತಾ ಸಮಯ ಕಳೆಯುವುದು ಸೇರಿದಂತೆ ಸ್ಕ್ರೀನಿಂಗ್‌ನಲ್ಲೇ ಸಮಯ ಹರಣ ಮಾಡುವವರ ಸಂಖ್ಯೆ ಹೆಚ್ಚು

ಇದು ಆರೋಗ್ಯಕ್ಕೂ ಹಾನಿಕರ. ಹೀಗಾಗಿ ಸ್ಕ್ರೀನಿಂಗ್‌ ಸಮಯ ಕಡಿಮೆ ಮಾಡಿ, ಡಿಜಿಟಲ್‌ ಡಿಟಾಕ್ಸ್‌ ಸಾಧ್ಯವಾಗಿಸಲು ನಿಮಗೆ ನೀವೇ ಕೆಲವು ನಿಯಮಗಳನ್ನು ಹಾಕಿಕೊಳ್ಳಿ.

ಡಿಜಿಟಲ್ ಸಾಧನ ಮುಕ್ತ ಸಮಯವನ್ನು ರಚಿಸಿ. ಊಟದ ಸಮಯ ಅಥವಾ ಮಲಗುವ ಮುನ್ನ ಮೊಬೈಲ್‌ ನೋಡುವುದಕ್ಕೆ ಕಡಿವಾಣ ಹಾಕಿ.

ಸಾಮಾಜಿಕ ಮಾಧ್ಯಮಗಳ ನೊಟಿಫಿಕೆಶನ್‌ ಸೆಟ್ಟಿಂಗ್‌ ಆಫ್‌ ಮಾಡಿ ಅಥವಾ ಮಿತಿಗೊಳಿಸಿ. ಇದು ಆನ್‌ ಇದ್ದರೆ ಆಗಾಗ ನಿಮ್ಮ ಫೋನ್ ಪರಿಶೀಲಿಸುವ ಪ್ರಚೋದನೆ ಸಿಗುತ್ತದೆ.

ಪುಸ್ತಕ ಓದುವುದು, ಚಿತ್ರಕಲೆ ಅಥವಾ ತೋಟಗಾರಿಕೆಯಂಥ ಹವ್ಯಾಸ ಬೆಳೆಸಿಕೊಳ್ಳಿ. ಇದರಲ್ಲಿ ಆಸಕ್ತಿ ಹೆಚ್ಚಿದಂತೆ ಸ್ಕ್ರೀನಿಂಗ್‌ ಸಮಯ ಕಡಿಮೆಯಾಗುತ್ತದೆ.

ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಭೌತಿಕವಾಗಿ ಬೆರೆಯಿರಿ. ಡಿಜಿಟಲ್‌ ಸಂಭಾಷಣೆಯನ್ನು ಆದಷ್ಟು ಕಡಿಮೆ ಮಾಡಿ

ನಿಮ್ಮ ದೈನಂದಿನ ದಿನಚರಿಯಲ್ಲಿ ವ್ಯಾಯಾಮ, ಧ್ಯಾನ ಅಭ್ಯಾಸ ಮಾಡಿ. ಸ್ಕ್ರೀನಿಂಗ್‌ ಅಲ್ಲದ ಸಮಯದಲ್ಲಿ ಕಣ್ಣುಗಳಿಗೆ ವಿಶ್ರಾಂತಿ ಕೊಡಿ

All photos: Pexels

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr