ಪ್ರತಿದಿನ ಸಂತೋಷವಾಗಿರಬೇಕಾ? ಈ 6 ಟಿಪ್ಸ್‌ ಪಾಲಿಸಿ 

By Reshma
Aug 21, 2024

Hindustan Times
Kannada

ಇತ್ತೀಚಿನ ಬಿಡುವಿಲ್ಲದ ದಿನಮಾನದಲ್ಲಿ ಹಲವರು ಸಂತೋಷಕ್ಕಾಗಿ ಹುಡುಕಾಟ ನಡೆಸುತ್ತಿರುತ್ತಾರೆ. ಬಹುತೇಕರು ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆಯಂತಹ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ

ಮನುಷ್ಯ ದುಃಖಿತನಾಗಲು ಕಾರಣಗಳು ಹಲವು. ಆದರೆ ದುಃಖವನ್ನು ಮೀರಿ ನಾನು ಪ್ರತಿದಿನ ಸಂತೋಷದಿಂದಿರಲು ದುಃಖ ಹಾಗೂ ನಿರಾಸೆಗೆ ಕಾರಣಗಳನ್ನು ಹುಡುಕಬೇಕು. ನಂತರ ಅವುಗಳಿಂದ ದೂರವಾಗುವ ಮಾರ್ಗ ಕಂಡುಕೊಳ್ಳಬೇಕು

ಹಾಗಾದರೆ ದುಃಖದಿಂದ ದೂರಾಗಿ ಸಂತೋಷವನ್ನು ಕಂಡುಕೊಳ್ಳಲು ಇರುವ ಮಾರ್ಗಗಳೇನು ಎಂಬುದನ್ನು ನೋಡಿ 

ಜೀವನದಲ್ಲಿ ಸಂತೋಷವಾಗಿರಬೇಕು ಅಂದ್ರೆ ನಿಮ್ಮನ್ನು ಇತರರೊಂದಿಗೆ ಹೋಲಿಸಿ ನೋಡುವುದನ್ನು ಬಿಡಿ. ಬೇರೆಯವರೊಂದಿಗೆ ಹೋಲಿಸುವುದರಿಂದ ಅಸಮರ್ಪಕ ಭಾವ ಮೂಡಬಹುದು, ಇದರಿಂದ ನೀವು ನಿರಾಸೆಗೊಳ್ಳಬಹುದು 

ಇತರರ ಮೇಲೆ ಅತಿಯಾದ ನಿರೀಕ್ಷೆ ಇಡುವುದು ಕೂಡ ನೋವಿಗೆ ಕಾರಣವಾಗುತ್ತದೆ. ನೀವು ಸಂತೋಷವಾಗಿರಲು ಬಯಸಿದರೆ ಬೇರೆಯವರ ಮೇಲೆ ಭರವಸೆ, ನಿರೀಕ್ಷೆ ಇರಿಸುವುದು ಸರಿಯಲ್ಲ. ಇದರಿಂದ ಮನಸ್ಸಿಗೆ ಹೆಚ್ಚು ಒತ್ತಡವಾಗುತ್ತದೆ

ಕೆಲವರು ತಮ್ಮ ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸುತ್ತಾರೆ. ಕೆಲವೊಮ್ಮೆ ಭೂತಕಾಲದಲ್ಲಿ ನಡೆದ ಸಂಗತಿಗಳ ಬಗ್ಗೆಯೂ ಹೆಚ್ಚು ಯೋಚನೆ ಮಾಡುತ್ತಾರೆ. ಇದರಿಂದ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ. ಇದರಿಂದ ನೆಮ್ಮದಿ ಹಾಳಾಗುತ್ತದೆ 

ನೀವು ಜೀವನದಲ್ಲಿ ಸಂತೋಷವಾಗಿರಬೇಕು ಅಂದ್ರೆ ವರ್ತಮಾನದಲ್ಲಿ ಬದುಕುವ ಅಭ್ಯಾಸ ಮಾಡಿಕೊಳ್ಳಿ. ಭವಿಷ್ಯ ಹೇಗಿದೆ ಎಂದು ಊಹಿಸಲು ಸಾಧ್ಯವಿಲ್ಲ. ಹಿಂದೆ ಗತಿಸಿದ ಅಳಿಸಲು ಸಾಧ್ಯವಿಲ್ಲ. ಹಾಗಾಗಿ ಈ ಎರಡರ ಬಗ್ಗೆ ಯೋಚನೆ ಬಿಟ್ಟು ಸಂತೋಷದಿಂದಿರಿ 

ನೀವು ಸದಾ ಸಂತೋಷದಿಂದ ಇರಬೇಕು ಅಂದ್ರೆ ವಿಶಾಲ ಹೃದಯ ಹೊಂದಿರಬೇಕು. ಯಾರ ಮೇಲೂ ಅಸೂಯೆ ಅಥವಾ ದ್ವೇಷದ ಭಾವನೆಗಳನ್ನು ಹೊಂದಬೇಡಿ. ಎಲ್ಲರನ್ನೂ ಪ್ರೀತಿಯಿಂದ ಕಾಣಿ 

ನಾವು ಸಂತೋಷವಾಗಿರಬೇಕು ಅಂದ್ರೆ ನಮ್ಮ ದೇಹವು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಹಾಗಾಗಿ ಪ್ರತಿದಿನ ಯೋಗ, ವ್ಯಾಯಾಮ, ಬೆಳಗಿನ ಹೊತ್ತು ವಾಕಿಂಗ್‌, ಧ್ಯಾನ ಮಾಡುವುದು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ 

ಬಿದ್ದುಬಿದ್ದು ನಗಿಸುವ 5 ಕನ್ನಡ ಜೋಕ್ಸ್‌ಗಳು