ಒತ್ತಡ, ಆತಂಕವನ್ನು ಶಮನಗೊಳಿಸಲು 9 ಮಾರ್ಗಗಳು 

Image Credits : Adobe Stock

By Priyanka Gowda
May 10, 2025

Hindustan Times
Kannada

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು 9 ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ. ಈ ಸಲಹೆಗಳು ಮನಸ್ಸು ಮತ್ತು ದೇಹವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತದೆ. 

Image Credits : Adobe Stock

ತೋಳು, ಕಾಲುಗಳು ಮತ್ತು ಬೆನ್ನನ್ನು ನಿಧಾನವಾಗಿ ಚಾಚಿ, ಕೆಲವು ನಿಮಿಷಗಳ ಕಾಲ ಹೀಗೆ ಮಾಡಿ. ಒತ್ತಡವನ್ನು ಕಡಿಮೆ ಮಾಡಲು ಇದು ಪರಿಣಾಮಕಾರಿ.

Image Credits : Adobe Stock

ಅತಿಯಾದ ಮೊಬೈಲ್ ವೀಕ್ಷಣೆ, ನಕಾರಾತ್ಮಕ ಸುದ್ದಿಗಳನ್ನು ನೋಡುವುದನ್ನು ಕಡಿಮೆ ಮಾಡಿ. ಆದಷ್ಟು ಮೊಬೈಲ್, ಲ್ಯಾಪ್‍ಟಾಪ್ ವೀಕ್ಷಣೆ ಕಡಿಮೆ ಮಾಡಿ ಮೆದುಳಿಗೆ ವಿರಾಮ ನೀಡಿ. 

Image Credits : Adobe Stock

ಪ್ರೀತಿ ಪಾತ್ರರೊಂದಿಗೆ, ಸ್ನೇಹಿತರೊಂದಿಗೆ ಅಥವಾ ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಿರಿ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ.

Image Credits : Adobe Stock

ಸಂಗೀತವು ಒತ್ತಡ ಮತ್ತು ಆತಂಕವನ್ನು ಶಾಂತಗೊಳಿಸುತ್ತದೆ. ನಿಮ್ಮ ಗಮನವನ್ನು ಬದಲಾಯಿಸಲು ನೆಚ್ಚಿನ ಸಂಗೀತವನ್ನು ಆಲಿಸಬಹುದು. 

Image Credits : Adobe Stock

ಲ್ಯಾವೆಂಡರ್, ಶ್ರೀಗಂಧ ಅಥವಾ ವೆನಿಲ್ಲಾದಂತಹ ಶಾಂತ ಸುಗಂಧ ದ್ರವ್ಯಗಳೊಂದಿಗೆ ಪರಿಮಳಯುಕ್ತ ಮೇಣದಬತ್ತಿಯನ್ನು ಬೆಳಗಿಸಬಹುದು. ಇದು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. 

Image Credits : Adobe Stock

ಸುಮ್ಮನೆ ಕುಳಿತುಕೊಳ್ಳಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. 10 ನಿಮಿಷಗಳ ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

Image Credits : Adobe Stock

ಸರಳ ಉಸಿರಾಟದ ವ್ಯಾಯಾಮಗಳನ್ನು ಪ್ರಯತ್ನಿಸಿ. 4 ಸೆಕೆಂಡುಗಳ ಕಾಲ ಆಳವಾಗಿ ಉಸಿರೆಳೆದುಕೊಳ್ಳಿ, 4 ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಳ್ಳಿ, 4 ಸೆಕೆಂಡುಗಳ ಕಾಲ ಉಸಿರನ್ನು ಹೊರಹಾಕಿ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. 

Image Credits : Adobe Stock

ಕೆಲವು ಆಹಾರಗಳು ನೈಸರ್ಗಿಕವಾಗಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬ್ಲೂಬೆರ್ರಿ, ಸಿಟ್ರಸ್ ಹಣ್ಣುಗಳು, ಡಾರ್ಕ್ ಚಾಕೊಲೇಟ್, ಮೊಟ್ಟೆ, ಸಾಲ್ಮನ್  ಮೀನು ಅಥವಾ ಮೊಸರು ಸೇವಿಸಿ.

Image Credits : Adobe Stock

ಕ್ಯಾಮೊಮೈಲ್ ಅಥವಾ ಗ್ರೀನ್ ಟೀ ಕುಡಿಯುವುದರಿಂದ ಒತ್ತಡ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

Image Credits : Adobe Stock

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು