ನಿಮಿಷಗಳಲ್ಲಿ ಮನಸ್ಸನ್ನು ಶಾಂತಗೊಳಿಸಲು ಸರಳ ತಂತ್ರಗಳು

PEXELS, HEALTHLINE

By Priyanka Gowda
Apr 17, 2025

Hindustan Times
Kannada

ಅತಿಯಾದ ಒತ್ತಡ, ಆತಂಕವನ್ನು ಅನುಭವಿಸುತ್ತಿದ್ದರೆ, ಪರಿಹಾರವನ್ನು ಕಂಡುಕೊಳ್ಳಲು ಇಲ್ಲಿವೆ ಸುಲಭ ತಂತ್ರ. ಮನಸ್ಸನ್ನು ಯಾವುದೇ ಸಮಯದಲ್ಲಿ ತಕ್ಷಣ ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ. 

PINTEREST

ತ್ವರಿತ ಶಾಂತತೆಗೆ ಕೆಲವು ಸರಳ ತಂತ್ರಗಳು ಇಲ್ಲಿವೆ: 

PINTEREST

4 ಸೆಕೆಂಡುಗಳ ಕಾಲ ಆಳವಾದ ಉಸಿರನ್ನು ತೆಗೆದುಕೊಳ್ಳಿ, 4 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ನಂತರ 4 ಸೆಕೆಂಡುಗಳ ಕಾಲ ಉಸಿರನ್ನು ಹೊರಹಾಕಿ. ಇದು ಒತ್ತಡವನ್ನು ಕಡಿಮೆ ಮಾಡಲು ಸಹಕಾರಿ. 3 ರಿಂದ 5 ಬಾರಿ ಪುನರಾವರ್ತಿಸಿ.

PINTEREST

5 ದೃಶ್ಯಗಳನ್ನು ಗಮನಿಸಿ, 4 ವಸ್ತುಗಳನ್ನು ಸ್ಪರ್ಶಿಸಿ, 3 ಶಬ್ಧಗಳನ್ನು ಆಲಿಸಿ, 2 ಪರಿಮಳಗಳನ್ನು ಆಸ್ವಾದಿಸಿ, ಒಂದನ್ನು ಸವಿಯಿರಿ. 

PINTEREST

ಪ್ರಶಾಂತ ಕಡಲತೀರ, ಕಾಡು ಅಥವಾ ಪರ್ವತವನ್ನು ಕಲ್ಪಿಸಿಕೊಳ್ಳಿ. ಶಾಂತಗೊಳಿಸುವ ದೃಶ್ಯೀಕರಣಗಳು ಮನಸ್ಸನ್ನು ತ್ವರಿತವಾಗಿ ಶಮನಗೊಳಿಸಬಹುದು ಮತ್ತು ಉದ್ವೇಗವನ್ನು ನಿವಾರಿಸಬಹುದು. 

PINTEREST

ಉದ್ವೇಗ, ಮನಸ್ಥಿತಿ ಸುಧಾರಿಸಲು ಒಂದು ಕೈಯನ್ನು ಮೇಲಕ್ಕೆತ್ತಿ ನಿಧಾನವಾಗಿ ಬಾಗಿ. ಈ ರೀತಿ 4 ರಿಂದ 5 ಬಾರಿ ಪುನರಾವರ್ತಿಸಿ.

PINTEREST

ಮುಖದ ಮೇಲೆ ತಣ್ಣೀರನ್ನು ಚಿಮುಕಿಸುವುದು ಅಥವಾ ಐಸ್ ಕ್ಯೂಬ್‍ನಿಂದ ಮಸಾಜ್ ಮಾಡುವುದರಿಂದ ಹೃದಯ ಬಡಿತವನ್ನು ನಿಧಾನಗೊಳಿಸುತ್ತದೆ ಮತ್ತು ಆತಂಕವನ್ನು ನಿವಾರಿಸುತ್ತದೆ.

PINTEREST

ಯಾವಾಗಲೂ ಸಕಾರಾತ್ಮಕವಾಗಿರಿ. ಒತ್ತಡ ಮತ್ತು ಭಯವನ್ನು ಕಡಿಮೆ ಮಾಡಲು ಶಾಂತವಾಗಿರಿ.

PINTEREST

ರಿಯಲ್ ಎಸ್ಟೇಟ್‌ನಿಂದ ಲಾಭವಾಗಲಿದೆ; ಮೇ 19ರ ದಿನಭವಿಷ್ಯ