ಮಾನಸಿಕ ಆರೋಗ್ಯ ಉತ್ತಮವಾಗಿರಲು ಹೀಗಿರಬೇಕು ನಮ್ಮ ದೈನಂದಿನ ದಿನಚರಿ

By Reshma
Jul 02, 2024

Hindustan Times
Kannada

ಯಾವುದೇ ವ್ಯಕ್ತಿ ಯಶಸ್ವಿಯಾಗಿರಬೇಕು ಅಂದ್ರೆ ದೈಹಿಕವಾಗಿ ಸದೃಢವಾಗಿರುವುದು ಎಷ್ಟು ಮುಖ್ಯವೋ ಮಾನಸಿಕವಾಗಿ ಆರೋಗ್ಯವಾಗಿರುವುದು ಅಷ್ಟೇ ಮುಖ್ಯ. 

ಆದರೆ ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು. ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಸದಾ ನಿಮ್ಮ ಮಾನಸಿಕ ಆರೋಗ್ಯ ಉತ್ತಮವಾಗಿರುವಂತೆ ನೋಡಿಕೊಳ್ಳಬಹುದು. 

ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ನಾವು ಪ್ರತಿದಿನ ತಪ್ಪದೇ ಅನುಸರಿಸಬೇಕಾದ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ. 

ಆರೋಗ್ಯ ತಜ್ಞರ ಪ್ರಕಾರ ಮಾನಸಿಕವಾಗಿ ಸದೃಢವಾಗಿರಲು ನಿದ್ರೆಯ ವಿಚಾರದಲ್ಲಿ ಖಂಡಿತ ರಾಜಿ ಮಾಡಿಕೊಳ್ಳಬೇಡಿ. ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ದೆ ಮಾಡಿ.

ಮಾನಸಿಕ ಆರೋಗ್ಯ ಸುಧಾರಿಸಲು ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣವನ್ನು ಕಡಿಮೆ ಬಳಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ನಿರಂತರ ಮೊಬೈಲ್‌ ಬಳಕೆ ಹಾಗೂ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯು ಮಾನಸಿಕ ಆರೋಗ್ಯವನ್ನು ಕೆಡಿಸುತ್ತದೆ. 

ಮನುಷ್ಯ ಸಾಮಾಜಿಕ ಪ್ರಾಣಿ, ಸಮಾಜ ಹಾಗೂ ಜನರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯಕರ ಸಂಬಂಧ ಹೊಂದುವುದು ಮಾನಸಿಕ ಆರೋಗ್ಯಕ್ಕೆ ಬಹಳ ಮುಖ್ಯ. 

ಪೌಷ್ಟಿಕ ಆಹಾರ ಸೇವನೆಯು ದೈಹಿಕ ಆರೋಗ್ಯಕ್ಕಷ್ಟೇ ಅಲ್ಲ ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ. 

ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಬಿಡುವಿಲ್ಲದ ಒತ್ತಡದಿಂದ ವಿಶ್ರಾಂತಿ ಪಡೆಯುವುದು ಮುಖ್ಯವಾಗುತ್ತದೆ. ಈ ರೀತಿ ವಿಶ್ರಾಂತಿ ಪಡೆಯುವುದರಿಂದ ಹಲವು ರೀತಿಯ ಮಾನಸಿಕ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 

ಪ್ರತಿದಿನ ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ಸುಧಾರಿಸಲು ಉತ್ತಮ ಮಾರ್ಗವಾಗಿದೆ. 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹಣಕಾಸು ಸಚಿವರಿವರು