ಕೆಲಸ ಕೆಲಸ ಅಂತ ಸುಸ್ತಾಗಬೇಡಿ, ವರ್ಕ್ ಲೈಫ್ ಬ್ಯಾಲೆನ್ಸ್ ಬಗ್ಗೆ ಈ 5 ವಿಷ್ಯ ತಿಳ್ಕೊಳಿ
By Reshma Apr 24, 2024
Hindustan Times Kannada
ಆರೋಗ್ಯಕರ ಹಾಗೂ ಸಂತೋಷದ ಜೀವನ ನಿಮ್ಮದಾಗಬೇಕು ಅಂದ್ರೆ ವರ್ಕ್ ಲೈಫ್ ಬ್ಯಾಲೆನ್ಸ್ ಮಾಡುವುದನ್ನು ಕಲಿಯಲೇಬೇಕು. ಹಾಗಾದರೆ ಕೆಲಸ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡುವುದು ಹೇಗೆ? ಇಲ್ಲಿದೆ ಉತ್ತರ.
ಸಮಯ ನಿರ್ವಹಣೆಯನ್ನು ಕಲಿಯಿರಿ
ವೃತ್ತಿ ಹಾಗೂ ಜೀವನ ಎರಡನ್ನೂ ಸಮವಾಗಿ ನಿಭಾಯಿಸಲು ಸಮಯ ನಿರ್ವಹಣೆಯನ್ನು ಕಲಿಯಬೇಕು. ನಿಮ್ಮ ಗುರಿಗಳ ಮೇಲೆ ಹೆಚ್ಚು ಗಮನ ನೀಡಿ. ನಿಮ್ಮ ಸಮಯದ ಪರಿಮಿತಿಯೊಳಗೆ ಕೆಲಸವನ್ನು ಮುಗಿಸಲು ಗಮನ ನೀಡಿ.
ಸಾಮಾಜಿಕವಾಗಿ ಬೆರೆಯಲು ಸಮಯ ನಿಗದಿ ಪಡಿಸಿ
ಜೀವನ ಎಂದರೆ ಕೇವಲ ಕೆಲಸ ಮಾತ್ರವಲ್ಲ. ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬದವರ ಜೊತೆ ಬೆರೆಯಲು ಸಮಯ ಕೊಡಿ. ಒಟ್ಟಾರೆ ಮಾನಸಿಕ ಆರೋಗ್ಯಕ್ಕೆ ಆರೋಗ್ಯಕರ ಸಂಬಂಧವೂ ಬಹಳ ಮುಖ್ಯ.
ಹವ್ಯಾಸ ರೂಢಿಸಿಕೊಳ್ಳಿ
ಮೋಜಿನ ಚಟುವಟಿಕೆ ಅಥವಾ ಹವ್ಯಾಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ದೇಹವನ್ನು ರಿಲ್ಯಾಕ್ಸ್ ಮಾಡಲು ಸಹಾಯ ಮಾಡುತ್ತದೆ.
ಮಿತಿ ಹಾಕಿಕೊಳ್ಳಿ
ವೈಯಕ್ತಿಕ ಬದುಕು ಹಾಗೂ ಕೆಲಸವನ್ನು ಸಮನಾಗಿ ನಿರ್ವಹಿಸಲು ಮಿತಿ ಹಾಕಿಕೊಳ್ಳುವುದು ಬಹಳ ಮುಖ್ಯ. ಆಗ ಎರಡಕ್ಕೂ ಸಮನಾಗಿ ಸಮಯ ಕೊಡಲು ಸಾಧ್ಯವಾಗುತ್ತದೆ.
ಸ್ವಯಂ ಒಲವು ಬೆಳೆಸಿಕೊಳ್ಳಿ
ನಿಮ್ಮ ಮೇಲೆ ನೀವು ಒಲವು ಬೆಳೆಸಿಕೊಳ್ಳಿ. ವೈಯಕ್ತಿಕ ಆಧ್ಯತೆಗಳಿಗೆ ಗಮನ ನೀಡಿ. ಇದು ಕೂಡ ವರ್ಕ್ ಲೈಫ್ ಬ್ಯಾಲೆನ್ಸ್‌ನ ಪ್ರಮುಖ ಅಂಶಗಳಲ್ಲಿ ಒಂದು.