ಇತ್ತೀಚೆಗೆ ಬಿಡುಗಡೆಯಾದ ಪ್ರೇಮಲು ಸಿನಿಮಾ ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಪ್ರೇಮಲು ಯಶಸ್ಸಿನಿಂದ ನಾಯಕಿ ಮಮಿತಾ ಬೈಜು ಅದೃಷ್ಟ ಖುಲಾಯಿಸಿದಂತೆ ಇದೆ. ಈಕೆಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ. ನಮ್ಮ ಕ್ರಶ್ ಎಂದು ಹೇಳುವವರು ಹೆಚ್ಚಾಗಿದ್ದಾರೆ. ಕೇರಳ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಈಕೆಗೆ ಅಭಿಮಾನಿಗಳು ಹೆಚ್ಚುತ್ತಿದ್ದಾರೆ.