ಬೆಳಗಿನ ಉಪಹಾರಕ್ಕೆ ನೆನೆಸಿದ ಹೆಸರುಕಾಳನ್ನು ಸೇವಿಸುವುದರ 10 ಪ್ರಯೋಜನಗಳು

freepik

By Priyanka Gowda
Oct 05, 2024

Hindustan Times
Kannada

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ದ್ವಿದಳ ಧಾನ್ಯವನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಗ್ಗೆ ಉಪಹಾರಕ್ಕೆ ತಯಾರಿಸಿ, ಸೇವಿಸುವುದರಿಂದ ಈ 10 ಪ್ರಯೋಜನಗಳನ್ನು ಪಡೆಯಬಹುದು.

freepik

ಪ್ರೋಟೀನ್‍ನ ಸಮೃದ್ಧ ಮೂಲ: ನೆನೆಸಿದ ಹೆಸರುಕಾಳು ಪ್ರೋಟೀನ್‍ನಲ್ಲಿ ಸಮೃದ್ಧ ಮೂಲವಾಗಿದ್ದು, ಇದನ್ನು ಸೇವಿಸುವುದರಿಂದ ದೇಹಕ್ಕೆ ಬೇಕಾದ ಅಗತ್ಯ ಪ್ರೋಟೀನ್‍ಗಳು ಸಿಗುತ್ತವೆ.

freepik

ಬಿ ವಿಟಮಿನ್, ಕಬ್ಬಿಣ, ಮೆಗ್ನೀಸಿಯಂನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುವ ನೆನೆಸಿದ ಹೆಸರು ಕಾಳು, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿದೆ.

freepik

ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಮಲಬದ್ಧತೆಯನ್ನು ತಡೆಯುವಲ್ಲಿ ಸಹಕಾರಿಯಾಗಿದ್ದು, ಕರುಳನ್ನು ಸಮತೋಲನದಲ್ಲಿಡುತ್ತದೆ.

freepik

ನೆನೆಸಿದ ಹೆಸರುಕಾಳಿನಲ್ಲಿ ಗ್ಲೈಸೆಮಿಕ್ ಸೂಚಿ ಕಡಿಮೆಯಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 

freepik

ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿರುವ ಈ ನೆನೆಸಿಟ್ಟ ಹೆಸರು ಕಾಳು ಸೇವನೆಯಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ತೂಕ ನಿರ್ವಹಣೆಗೆ ಸಹಕಾರಿ.

freepik

ಫ್ಲೇವನಾಯ್ಡ್‌ಗಳು ಸೇರಿದಂತೆ ಉತ್ಕರ್ಷಣಾ ನಿರೋಧಕಗಳಿಂದ ಸಮೃದ್ಧವಾಗಿರುವ ಇದು, ದೇಹದಲ್ಲಿ ಸ್ವತಂತ್ರ ರಾಡಿಕಲ್‍ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

freepik

ಇದರಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸುವಲ್ಲಿ ಸಹಕಾರಿಯಾಗಿದೆ. ಒಟ್ಟಾರೆ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. 

freepik

ವಿಟಿಮಿನ್ ಎ, ಸಿ ಮತ್ತು ಸತುವಿನಂತಹ ಅಂಶಗಳಿದ್ದು, ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 

freepik

ತ್ವಚೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆರೋಗ್ಯಕರ, ಹೊಳೆಯುವ ಚರ್ಮಕ್ಕೆ ಪ್ರಯೋಜನಕಾರಿಯಾಗಿದ್ದು, ಸುಕ್ಕುಗಟ್ಟುವಿಕೆಯನ್ನು ತಡೆಯುವಲ್ಲಿ ಸಹಕಾರಿ.

freepik

ಮೆಗ್ನೀಸಿಯಂ, ಬಿ ವಿಟಮಿನ್‌ಗಳು ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ. ದಿನವಿಡೀ ಏಕಾಗ್ರತೆ ಹೊಂದಿರಲು ಸಹಕಾರಿ.

freepik

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು