ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ
By Prasanna Kumar P N
Dec 08, 2024
Hindustan Times
Kannada
ಭಾರತೀಯ ನಾಯಕ ರೋಹಿತ್ ಶರ್ಮಾ ಸತತವಾಗಿ ಅತಿ ಹೆಚ್ಚು ಟೆಸ್ಟ್ ಸೋಲು ಕಂಡು ಕೆಟ್ಟ ದಾಖಲೆಯೊಂದನ್ನು ಬರೆದಿದ್ದಾರೆ.
ಅಡಿಲೇಡ್ ಟೆಸ್ಟ್ ಸೋಲಿನೊಂದಿಗೆ ವಿರಾಟ್ ಕೊಹ್ಲಿ ಎಂಎಸ್ ಧೋನಿ ನಂತರ ರೋಹಿತ್ ಮುಜುಗರದ ದಾಖಲೆ ಸರಿಗಟ್ಟಿದ್ದಾರೆ.
ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ, ಭಾರತ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿತು.
ಇದರೊಂದಿಗೆ ಭಾರತದ ಪರ ಸತತ 4 ಪಂದ್ಯಗಳನ್ನು ಸೋತ ಕುಖ್ಯಾತಿಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಸತತ ಟೆಸ್ಟ್ ಪಂದ್ಯ ಸೋತಿರುವ ಭಾರತದ ನಾಯಕರ ಪಟ್ಟಿ ಹೀಗಿದೆ.
ಲಾಲಾ ಅಮರ್ನಾಥ್: 1948ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ಮೂರು ಪಂದ್ಯಗಳಲ್ಲಿ ಭಾರತ ಸೋತಿತ್ತು.
ಬಿಶನ್ ಸಿಂಗ್ ಬೇಡಿ: 1976-1977ರಲ್ಲಿ ಇಂಗ್ಲೆಂಡ್ ವಿರುದ್ಧ ಸತತ 3 ಪಂದ್ಯಗಳಲ್ಲಿ ತನ್ನ ನಾಯಕತ್ವದಲ್ಲಿ ಭಾರತ ಸೋತಿತ್ತು.
ಸುನಿಲ್ ಗವಾಸ್ಕರ್: 1982-1983ರಲ್ಲಿ ತನ್ನ ನಾಯಕತ್ವದಲ್ಲಿ ಸತತ 3 ಪಂದ್ಯಗಳಲ್ಲಿ ಭಾರತ ಸೋತಿತ್ತು. ಪಾಕಿಸ್ತಾನ ವಿರುದ್ಧವೇ ಮೂರು ಪಂದ್ಯಗಳು.
ಮೊಹಮ್ಮದ್ ಅಜರುದ್ದೀನ್: 1998ರಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದರು. ಆಸ್ಟ್ರೇಲಿಯಾ, ಜಿಂಬಾಬ್ವೆ, ನ್ಯೂಜಿಲೆಂಡ್ ವಿರುದ್ಧ ತನ್ನ ನಾಯಕತ್ವದಲ್ಲಿ ಭಾರತ ಸೋತಿತ್ತು.
ದತ್ತ ಗಾಯಕ್ವಾಡ್: 1959ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಭಾರತ ಸೋತಿತ್ತು.
ಎಂಎಸ್ ಧೋನಿ: 2011ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಭಾರತ ಸೋತಿತ್ತು.
ಎಂಎಸ್ ಧೋನಿ: 2014ರಲ್ಲಿ ಇಂಗ್ಲೆಂಡ್ (3 ಪಂದ್ಯ), ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಭಾರತ ಸೋತಿತ್ತು.
ವಿರಾಟ್ ಕೊಹ್ಲಿ: 2020-2021ರಲ್ಲಿ ನ್ಯೂಜಿಲೆಂಡ್ (2 ಪಂದ್ಯ), ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ 4 ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.
ರೋಹಿತ್ ಶರ್ಮಾ: 2024ರಲ್ಲಿ ನ್ಯೂಜಿಲೆಂಡ್ (3 ಪಂದ್ಯ), ಆಸ್ಟ್ರೇಲಿಯಾ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಭಾರತ ಸೋತಿತ್ತು.
ಸಚಿನ್ ತೆಂಡೂಲ್ಕರ್: 1999-2000 ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ ಆಫ್ರಿಕಾ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ ಐದು ಪಂದ್ಯಗಳಲ್ಲಿ ಭಾರತ ಸೋತಿತ್ತು.
ಮನ್ಸೂರ್ ಅಲಿ ಖಾನ್ ಪಟೌಡಿ: 1967-1968 ರಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧ ತನ್ನ ನಾಯಕತ್ವದಲ್ಲಿ ಸತತ 6 ಪಂದ್ಯಗಳಲ್ಲಿ ಭಾರತ ಸೋತಿತ್ತು.
26 ಎಸೆತಗಳಲ್ಲಿ ಪಂದ್ಯ ಗೆದ್ದ ಭಾರತ ತಂಡ
Photos: ICC/BCCI
ಮುಂದಿನ ಸ್ಟೋರಿ ಕ್ಲಿಕ್ ಮಾಡಿ