ಐಪಿಎಲ್​ನಲ್ಲಿ ಹೆಚ್ಚು ಶತಕ; ಕೊಹ್ಲಿಗೆ ಅಗ್ರಸ್ಥಾನ, ಬಟ್ಲರ್​ಗೆ ಯಾವ ಸ್ಥಾನ?

By Prasanna Kumar P N
Apr 07, 2024

Hindustan Times
Kannada

ಆರ್​​ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 8ನೇ ಶತಕ ಸಿಡಿಸಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಆರ್​​ಆರ್​ ವಿರುದ್ಧ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಸಹಿತ 113* ರನ್ ಚಚ್ಚಿದರು.

17ನೇ ಆವೃತ್ತಿಯ ಐಪಿಎಲ್​ನ 19ನೇ ಪಂದ್ಯದಲ್ಲಿ ಕೊಹ್ಲಿ ಬಳಿಕ ಜೋಸ್ ಬಟ್ಲರ್​ ಶತಕ ಸಿಡಿಸಿ ದಾಖಲೆ ಬರೆದರು. ಐಪಿಎಲ್​ನಲ್ಲಿ 6ನೇ ಶತಕ ಸಿಡಿಸಿ ಕ್ರಿಸ್​ಗೇಲ್ ದಾಖಲೆಯನ್ನು ಸರಿಗಟ್ಟಿದರು.

ಕ್ರಿಸ್​ ಗೇಲ್ ಅವರು ಐಪಿಎಲ್​​ನಲ್ಲಿ 6 ಶತಕ ಸಿಡಿಸಿದ್ದಾರೆ. ಸದ್ಯ ಜೋಸ್ ಬಟ್ಲರ್​ ಜೊತೆಗೆ 6 ಶತಕದೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್, ಈವರೆಗೂ ನಾಲ್ಕು ಶತಕ ಸಿಡಿಸಿದ್ದಾರೆ. ಅಲ್ಲದೆ, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಡೇವಿಡ್ ವಾರ್ನರ್ ಮತ್ತು ಶೇನ್ ವಾಟ್ಸನ್​ ಕೂಡ ಐಪಿಎಲ್​ ತಲಾ 4 ಶತಕ ಸಿಡಿಸಿದ್ದಾರೆ.

ಶುಭ್ಮನ್ ಗಿಲ್, ಎಬಿ ಡಿವಿಲಿಯರ್ಸ್, ಸಂಜು ಸ್ಯಾಮ್ಸನ್ ಅವರು ತಲಾ 3 ಶತಕ ಸಿಡಿಸಿ ನಂತರದ ಸ್ಥಾನದಲ್ಲಿದ್ದಾರೆ.

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ