2024ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಧಿಕ ಜನರು ನೋಡಿರುವ ಭಾರತದ 10 ಸಿನಿಮಾಗಳಿವು
By Praveen Chandra B Dec 18, 2024
Hindustan Times Kannada
1. ಮಹಾರಾಜ: ವಿಜಯ ಸೇತುಪತಿ ನಟನೆಯ ಮಹಾರಾಜ ಸಿನಿಮಾ ಈ ವರ್ಷ ಅತ್ಯಧಿಕ ಜನರು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿದ ಸಿನಿಮಾವಾಗಿದೆ. 19.7 ದಶಲಕ್ಷ ಜನರು ವೀಕ್ಷಿಸಿದ್ದಾರೆ.
2. ಕ್ರ್ಯೂ: ಟಬು, ಕರೀನಾ ಕಪೂರ್, ಕೃತಿ ಸನೋನ್ ನಟನೆಯ ಕ್ರ್ಯೂ ಎಂಬ ಬಾಲಿವುಡ್ ಸಿನಿಮಾ 19.7 ದಶಲಕ್ಷ ವೀಕ್ಷಣೆ ಪಡೆದಿದೆ.
3. ಲಾಪತಾ ಲೇಡಿಸ್: ಈ ಸಿನಿಮಾವನ್ನು 17.1 ದಶಲಕ್ಷ ಜನರು ವೀಕ್ಷಿಸಿದ್ದಾರೆ. ಆಸ್ಕರ್ ಪ್ರಶಸ್ತಿ ರೇಸ್‌ನಲ್ಲಿದ್ದ ‘ಮಿಸ್ಸಿಂಗ್ ಲೇಡಿಸ್’ (ಲಾಪತಾ ಲೇಡೀಸ್) ಸಿನಿಮಾವು ಆಸ್ಕರ್ ರೇಸ್‌ನಿಂದ ಹೊರಬಿದ್ದಿದೆ.
4. ಡುಪಟ್ಟಿ ಸಿನಿಮಾವನ್ನು 17 ದಶಲಕ್ಷ ಜನರು ವೀಕ್ಷಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಧಿಕ ಜನರು ವೀಕ್ಷಿಸಿದ ಅಗ್ರ ನಾಲ್ಕನೇ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.
5. ಸೈತಾನ್: ಜಯ್ ದೇವಗನ್, ಆರ್ ಮಾಧವನ್, ಜ್ಯೋತಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸೈತಾನ್ ಸಿನಿಮಾವು ಅತ್ಯಧಿಕ ವೀಕ್ಷಣೆ ಪಡೆದ ಸಿನಿಮಾವಾಗಿದೆ. ಇದು 14.8 ದಶಲಕ್ಷ ವೀಕ್ಷಣೆ ಪಡೆದಿದೆ.
6. ಫೈಟರ್: ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಫೈಟರ್ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ 14 ದಶಲಕ್ಷ ವೀಕ್ಷಣೆ ಪಡೆದಿದೆ.
7. ಅನಿಮಲ್: ರಣಬೀರ್ ಕಪೂರ್ ನಟನೆಯ ಅನಿಮಲ್ ಈ ಸಿನಿಮಾ 2024ರಲ್ಲಿ 13.6 ದಶಲಕ್ಷ ವೀಕ್ಷಣೆ ಪಡೆದಿದೆ.
8. ಸೆಕ್ಟರ್36: ಈ ಸಿನಿಮಾ 12.1 ದಶಲಕ್ಷ ವೀಕ್ಷಣೆ ಪಡೆದಿದೆ.
9. ಲಕ್ಕಿಬಾಸ್ಕರ್:ದುಲ್ಕರ್ ಸಲ್ಮಾನ್ ನಟನೆಯ ಲಕ್ಕಿ ಬಾಸ್ಕರ್ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ 11.7 ದಶಲಕ್ಷ ವೀಕ್ಷಣೆ ಪಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಈ ಸಿನಿಮಾ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ವೀಕ್ಷಣೆ ಪಡೆದಿದೆ.
10. ಮಹಾರಾಜ್. ಹಿಂದಿಯ ಮಹಾರಾಜ್ ಎಂಬ ಸಿನಿಮಾವೂ 10.8 ದಶಲಕ್ಷ ವೀಕ್ಷಣೆ ಪಡೆದು ಟಾಪ್ 10ರಲ್ಲಿದೆ.
ಪ್ರತಿದಿನ ಮೆಟ್ಟಿಲುಗಳನ್ನು ಹತ್ತುವುದರ ಆರೋಗ್ಯ ಪ್ರಯೋಜನಗಳು ಇಲ್ಲಿವೆ