ಮುಂಬೈ ಇಂಡಿಯನ್ಸ್​ನಿಂದ ಹೊರ ಬಿದ್ದ ಸ್ಟಾರ್ ಆಟಗಾರ!

By Prasanna Kumar P N
Apr 11, 2024

Hindustan Times
Kannada

ಆರ್​ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತವಾಗಿದೆ.

ತಂಡದ ಪ್ರಮುಖ ಆಟಗಾರ ಹಾಗೂ ವಿಕೆಟ್ ಕೀಪರ್ ವಿಷ್ಣು ವಿನೋದ್ ಗಾಯದಿಂದ ಹೊರ ಬಿದ್ದಿದ್ದಾರೆ.

ವಿಷ್ಣು ವಿನೋದ್ ಸ್ಥಾನಕ್ಕೆ 24 ವರ್ಷದ ಹಾರ್ವಿಕ್ ದೇಸಾಯಿಗೆ ಅವಕಾಶ ನೀಡಲಾಗಿದೆ.

ಸೌರಾಷ್ಟ್ರದ ವಿಕೆಟ್​ ಕೀಪರ್ ಹಾರ್ವಿಕ್ ದೇಸಾಯಿ 2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು.

ದೇಸಾಯಿ ಅವರು ದೇಶೀಯ ಕ್ರಿಕೆಟ್‌ನ ಎಲ್ಲಾ 3 ಸ್ವರೂಪಗಳಲ್ಲೂ ಸೆಂಚುರಿ ಬಾರಿಸಿದ್ದಾರೆ.

ವಿಷ್ಣು ವಿನೋದ್ ತೋಳಿನ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಈ ಬಗ್ಗೆ ಮುಂಬೈ ಅಧಿಕೃತವಾಗಿ ಮಾಹಿತಿ ನೀಡಿದೆ.  

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ