ಸುನೀತಾ ವಿಲಿಯಮ್ಸ್ ಅಂತರಿಕ್ಷದಲ್ಲಿ ಸಿಲುಕಿ 6 ತಿಂಗಳು ಪೂರ್ಣ, ವಾಪಸ್ ಬರುವುದೆಂದು?
By Praveen Chandra B Dec 06, 2024
Hindustan Times Kannada
ಬಾಹ್ಯಾಕಾಶ ನಿಲ್ದಾಣದ ರಿಪೇರಿ ಕೆಲಸಕ್ಕೆಂದು ಕೆಲವು ದಿನಗಳ ಮಟ್ಟಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಸುನೀತಾ ವಿಲಿಯಮ್ಸ್ ಹೋಗಿದ್ದರು.
ಆದರೆ, ವಾಪಸ್ ಬರಲಾಗದೆ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್‌ಮೋರ್ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದಿದ್ದಾರೆ.
ಈ ರೀತಿ ಇವರು ಅಲ್ಲಿ ಸಿಲುಕಿಕೊಂಡು ಆರು ತಿಂಗಳಾಗಿವೆ. ಇನ್ನೂ ಎರಡು ತಿಂಗಳು ಅವರು ಅಲ್ಲಿ ಇರಬೇಕಾಗಿದೆ. ನಂತರ ಅವರು ಅಲ್ಲಿಂದ ವಾಪಸ್ ಬರಲಿದ್ದಾರೆ.
ಬೋಯಿಂಗ್‌ನ ನ್ಯೂ ಸ್ಟಾರ್‌ಲೈನ್ ನೌಕೆಯಲ್ಲಿ ಇವರು ಪ್ರಯಾಣ ಬೆಳೆಸಿ ಐಎಸ್‌ಎಸ್ ತಲುಪಿದ್ದರು.
ಆದರೆ, ಎಂಜಿನ್ ಸೋರಿಕೆ ಮತ್ತು ಇತರೆ ಸಮಸ್ಯೆಯಿಂದ ಈ ಕ್ಯಾಪ್ಸೂಲ್‌ನಲ್ಲಿ ವಾಪಸ್ ಬರುವುದು ಕಷ್ಟ ಎಂದು ನಾಸಾ ನಿರ್ಧರಿಸಿತ್ತು. ಹೀಗಾಗಿ ಅಲ್ಲಿಯೇ ಬಾಕಿಯಾಗಿದ್ದಾರೆ.
ಇವರಿಬ್ಬರು ಅಂತರಿಕ್ಷ ನಿಲ್ದಾಣದಲ್ಲಿ ಬಾಕಿಯಾಗಿರುವುದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಈ ಗಗನಯಾನಿಗಳ ಸುರಕ್ಷತೆಯನ್ನು ನಾಸಾ ಕಡೆಗಣಿಸಿತ್ತೇ ಎಂದು ಟೀಕೆಗಳು ಎದುರಾಗಿದ್ದವು.
ಆದರೆ, ಇವರಿಬ್ಬರು "ಸಿಲುಕಿಕೊಂಡಿದ್ದಾರೆ" ಎನ್ನುವುದನ್ನು ನಾಸಾ ಒಪ್ಪಿಲ್ಲ. "ಇವರಿಬ್ಬರ ಪರಿಸ್ಥಿತಿ ಉತ್ತಮವಾಗಿದೆ, ತಮ್ಮ ಗುರಿಯನ್ನು ಒಪ್ಪಿಕೊಂಡಿದ್ದಾರೆ" ಎಂದು ನಾಸಾ ಹೇಳಿದೆ.
ಫೆಬ್ರವರಿ ತಿಂಗಳಲ್ಲಿ ಇವರಿಬ್ಬರು ಭೂಮಿಗೆ ವಾಪಸ್ ಬರುವ ನಿರೀಕ್ಷೆಯಿದೆ.
ಅಮೆರಿಕದ ಗಗನಯಾತ್ರಿಯ ಹೆತ್ತವರು ಭಾರತೀಯ ಮೂಲದವರು. ಸುನೀತಾ ವಿಲಿಯಮ್ಸ್ ಜನಿಸಿದ್ದು, ಓದಿದ್ದು, ಉದ್ಯೋಗ ಮಾಡಿದ್ದು ಎಲ್ಲವೂ ಅಮೆರಿಕದಲ್ಲೇ. ಇವರು ಅಮೆರಿಕದ ಗಗಗನಯಾತ್ರಿ, ಅಮೆರಿಕದ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದಾರೆ.