ದೆಹಲಿ ಚುನಾವಣೆ: ಎಎಪಿ ಇಷ್ಟು ಸ್ಥಾನ ಗೆಲ್ಲುತ್ತೆ ಎಂದ ಅರವಿಂದ್ ಕೇಜ್ರಿವಾಲ್
By Jayaraj
Feb 03, 2025
Hindustan Times
Kannada
ಫೆಬ್ರುವರಿ 5ರಂದು ದೆಹಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಒಟ್ಟು 70 ವಿಧಾನಸಭಾ ಸ್ಥಾನಗಳಲ್ಲಿ ಎಎಪಿ 55 ಸ್ಥಾನಗಳನ್ನು ಗೆಲ್ಲಬಹುದು ಎಂದು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.
ದೆಹಲಿ ಮಹಿಳೆಯರು ಸಂಪೂರ್ಣ ಶಕ್ತಿಯಿಂದ ಮತ ಚಲಾಯಿಸಿದರೆ, ಪುರುಷರನ್ನು ಪಕ್ಷಕ್ಕೆ ಮತ ಚಲಾಯಿಸುವಂತೆ ಮನವೊಲಿಸಿದರೆ, ಈ ಸ್ಥಾನ ಹೆಚ್ಚಬಹುದು.
ಪಕ್ಷದ ಗೆಲುವಿನ ಸಂಖ್ಯೆ 60 ದಾಟಬಹುದು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದರು.
ಪಕ್ಷ ನವದೆಹಲಿ, ಜಂಗ್ಪುರ ಮತ್ತು ಕಲ್ಕಾಜಿ ಸ್ಥಾನಗಳನ್ನು ಐತಿಹಾಸಿಕ ಅಂತರದಿಂದ ಗೆಲ್ಲಲಿದೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಫೆಬ್ರುವರಿ 8ರಂದು ಪ್ರಕಟವಾಗಲಿದೆ.
ದೆಹಲಿ ವಿಧಾನಸಭಾ ಚುನಾವಣೆಯ ಹೈ-ವೋಲ್ಟೇಜ್ ಪ್ರಚಾರ ಫೆ.3ರ ಸಂಜೆ 5 ಗಂಟೆಗೆ ಕೊನೆಗೊಂಡಿದೆ.
2020ರ ಚುನಾವಣೆಯಲ್ಲಿ, ಎಎಪಿ 62 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 8 ಹಾಗೂ ಕಾಂಗ್ರೆಸ್ ತನ್ನ ಖಾತೆ ತೆರೆಯಲು ವಿಫಲವಾಗಿತ್ತು.
ಅದಕ್ಕೂ ಹಿಂದೆ 2015ರಲ್ಲಿ ಎಎಪಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Photos: ANI
ಮದುಮಗಳಂತೆ ಸಿಂಗಾರಗೊಂಡ ನಿರೂಪಕಿ ಚೈತ್ರಾ ವಾಸುದೇವನ್
ಮುಂದಿನ ಸ್ಟೋರಿ ಕ್ಲಿಕ್ ಮಾಡಿ