ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು (ಜ.20) ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪದಗ್ರಹಣ ಸಮಾರಂಭವು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಲ್ ಕಟ್ಟಡ ರೊಟುಂಡಾದಲ್ಲಿ ನಡೆಯಲಿದೆ.
ಪ್ರಮಾಣ ವಚನವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ. ಜಾನ್ ರಾಬರ್ಟ್ಸ್ ಅವರು ಎರಡನೇ ಬಾರಿಗೆ ಟ್ರಂಪ್ ಅಧಿಕಾರ ಸ್ವೀಕಾರಕ್ಕೆ ಸಾಕ್ಷಿಯಾಗಲಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅಮೆರಿಕದ ನೂತನ ಅಧ್ಯಕ್ಷರು ಉದ್ಘಾಟನಾ ಭಾಷಣ ಮಾಡುವ ನಿರೀಕ್ಷೆಯಿದೆ. ಈ ವೇಳೆ ಮುಂದಿನ ನಾಲ್ಕು ವರ್ಷಗಳ ಅಧಿಕಾರವಧಿಯ ಯೋಜನೆಗಳನ್ನು ವಿವರಿಸುತ್ತಾರೆ.
ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರು(ಟ್ರಂಪ್), ಅವರ ಪತ್ನಿ, ಉಪಾಧ್ಯಕ್ಷರು, ಸೆನೆಟ್ ನಾಯಕರು ಮತ್ತು ಅತಿಥಿಗಳು ಇರಲಿದ್ದಾರೆ. ಆ ನಂತರ ಎಲ್ಲರೂ ಭೋಜನ ಕೂಟದಲ್ಲಿ ಭಾಗವಹಿಸುತ್ತಾರೆ.
ಉದ್ಘಾಟನಾ ಸಮಾರಂಭಗಳ ಜಂಟಿ ಕಾಂಗ್ರೆಸ್ ಸಮಿತಿ (JCCIC) ಭೋಜನ ಕೂಟವನ್ನು ಆಯೋಜಿಸುತ್ತದೆ.
ಮೊದಲನೆಯದಾಗಿ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವ ಮೂಲಕ ಅಧ್ಯಕ್ಷರಾಗಿ ಟ್ರಂಪ್ ತಮ್ಮ ಎರಡನೇ ಅವಧಿಯನ್ನು ಅಧಿಕೃತವಾಗಿ ಆರಂಭಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷರು ಸಾಂಪ್ರದಾಯಿಕವಾಗಿ ಕ್ಯಾಪಿಟಲ್ ಕಟ್ಟಡದ ಮುಂದೆ ಅಧಿಕಾರ (ಹೊರಾಂಗಣದಲ್ಲಿ) ವಹಿಸಿಕೊಳ್ಳುತ್ತಾರೆ. ಆದರೆ ತೀವ್ರ ಚಳಿಯಿಂದಾಗಿ ಕಾರ್ಯಕ್ರಮವನ್ನು ಒಳಗೆ ನಡೆಸುವುದಾಗಿ ಟ್ರಂಪ್ ಹೇಳಿದ್ದಾರೆ.
Photo: Instagram
ನೂತನ ಅಧ್ಯಕ್ಷರ ಉದ್ಘಾಟನಾ ಮೆರವಣಿಗೆ ಕೂಡಾ ಒಳಗೆ ನಡೆಯಲಿದೆ. 1985ರ ನಂತರ ಇದೇ ಮೊದಲ ಬಾರಿಗೆ ಒಳಗೆ ನಡೆಯಲಿದೆ.