ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ಹಣಕಾಸು ನೀತಿಗಳಿಂದ ಮಾತ್ರವಲ್ಲದೆ ಬಜೆಟ್ ದಿನದಂದು ತಮ್ಮ ವಿಶಿಷ್ಟ ಸೀರೆಗಳಿಂದಲೂ ಹೆಸರುವಾಸಿ.
ಪ್ರತಿ ಹಣಕಾಸು ವರ್ಷದ ಬಜೆಟ್ ಮಂಡನೆ ದಿನ ವಿಶಿಷ್ಠ ವಿನ್ಯಾಸ ಸೀರೆ ಉಟ್ಟು ಸಂಸತ್ತಿಗೆ ಹಾಜರಾಗುತ್ತಾರೆ. ಇದು ಭಾರತೀಯ ಜವಳಿ ಪರಂಪರೆಯ ಶ್ರೀಮಂತಿಕೆ ಬಿಂಬಿಸುತ್ತದೆ.
AFP
ಮೋದಿ 3.0 ಸರ್ಕಾರದ ಮೊದಲ ಬಜೆಟ್‌ಗೆ ನಿರ್ಮಲಾ ಸೀತಾರಾಮನ್ ಮಜೆಂಟಾ ಮತ್ತು ಗೋಲ್ಡನ್ ಬಣ್ಣದ ಬಿಳಿದ ಸೀರೆ ಉಟ್ಟಿದ್ದರು. ಗಾಢ ಗುಲಾಬಿ ಬಣ್ಣದ ರವಿಕೆ ಸೀರೆಗೆ ಮ್ಯಾಚ್ ಆಗುತ್ತಿತ್ತು.
PTI
2024ರ ಮಧ್ಯಂತರ ಬಜೆಟ್‌ಗೆ ನೀಲಿ ಮತ್ತು ಕ್ರೀಮ್ ಬಣ್ಣ ಮಿಶ್ರಿತ ಟಸ್ಸಾರ್ ರೇಷ್ಮೆ ಸೀರೆ ಧರಿಸಿದ್ದರು. ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾದ ಟಸ್ಸಾರ್ ರೇಷ್ಮೆ ಸೀರೆಗೆ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ಕಸೂತಿ ಇದೆ.
Reuters
2023ರ ಬಜೆಟ್ ವೇಳೆ ಕರ್ನಾಟಕದ ಸಾಂಪ್ರದಾಯಿಕ ಕಸೂತಿ ಇರುವ ಮೆರೂನ್ ರೇಷ್ಮೆ ಸೀರೆ ಧರಿಸಿದ್ದರು. ಎಂಬ್ರಾಯಿಡರಿ ಕೆಲಸವು ಕರ್ನಾಟಕದ ಶ್ರೀಮಂತ ಜವಳಿ ಪರಂಪರೆಯ ಕಲೆಯನ್ನು ಪ್ರತಿಬಿಂಬಿಸುತ್ತದೆ.
Reuters
ಸೀತಾರಾಮನ್ 2022ರ ಬಜೆಟ್ ಸಮಯದಲ್ಲಿ ಒಡಿಶಾದ ಕಂದು ಬಣ್ಣದ ಬೊಮ್ಕೈ ಸೀರೆ ಧರಿಸಿದ್ದರು. ಸರಳ ಬಾರ್ಡರ್ ಇರುವ ಸೀರೆ ಒಡಿಶಾದ ಕೈಮಗ್ಗ ಪರಂಪರೆಯನ್ನು ಬಿಂಬಿಸಿತು.
AFP
2021ರ ಬಜೆಟ್ ವೇಳೆ ಕೆಂಪು ಮತ್ತು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆ ಧರಿಸಿದ್ದರು. ಈ ಸೀರೆ ಹೈದರಾಬಾದ್‌ನ ವಿಶಿಷ್ಟ ಇಕತ್ ವಿನ್ಯಾಸವನ್ನು ಒಳಗೊಂಡಿತ್ತು.
Reuters
2020ರಲ್ಲಿ, ಸೀತಾರಾಮನ್ ಹಳದಿ-ಚಿನ್ನದ ಬಣ್ಣದ ರೇಷ್ಮೆ ಸೀರೆ ಧರಿಸಿದ್ದರು. ಇದಕ್ಕೆ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು. ನೀಲಿ ಬಣ್ಣದ ತೆಳು ಬಾರ್ಡರ್ ಸೀರೆಗಿತ್ತು.
Reuters
2019ರಲ್ಲಿ ತಮ್ಮ ಮೊದಲ ಬಜೆಟ್ ಮಂಡನೆಗಾಗಿ ಸೀತಾರಾಮನ್ ಚಿನ್ನದ ಬಣ್ಣದ ಬಾರ್ಡರ್ ಇರುವ ಗುಲಾಬಿ ಮಂಗಳಗಿರಿ ಸೀರೆ ಧರಿಸಿದ್ದರು.