ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲಿದೆ. ಇದೇ ವೇಳೆ ಎಎಪಿ 22 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದೆ.
PTI
ದೆಹಲಿಯಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಶ್ರೀಮಂತ ಅಭ್ಯರ್ಥಿಗಳ ಫಲಿತಾಂಶ ಏನಾಯ್ತು ನೋಡೋಣ
ANI
ದೆಹಲಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ, 259 ಕೋಟಿ ರೂ. ಆಸ್ತಿ ಒಡೆಯ ಬಿಜೆಪಿಯ ಕರ್ನೈಲ್ ಸಿಂಗ್, ಶಕುರ್ ಬಸ್ತಿ ಕ್ಷೇತ್ರದಲ್ಲಿ 21,000 ಮತಗಳಿಂದ ಗೆದ್ದರು.
FB
248.85 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, ರಾಜೌರಿ ಗಾರ್ಡನ್‌ನಲ್ಲಿ 18,000 ಮತಗಳಿಂದ ಗೆದ್ದರು.
130.90 ಕೋಟಿ ರೂ. ಆಸ್ತಿ ಹೊಂದಿರುವ ಕಾಂಗ್ರೆಸ್‌ನ ಗುರುಚರಣ್ ಸಿಂಗ್, ಕೃಷ್ಣ ನಗರದಿಂದ ಸ್ಪರ್ಧಿಸಿ ಬಿಜೆಪಿ ವಿರುದ್ಧ 66,000 ಮತಗಳಿಂದ ಸೋತರು.
ದೆಹಲಿಯ ಶ್ರೀಮಂತ ಅಭ್ಯರ್ಥಿಗಳಲ್ಲಿ 4ನೇ ಸ್ಥಾನದಲ್ಲಿರುವ 115.63 ಕೋಟಿ ರೂ. ಆಸ್ತಿ ಒಡೆಯ ಬಿಜೆಪಿಯ ಪರ್ವೇಶ್ ಸಿಂಗ್ ವರ್ಮಾ, ಅರವಿಂದ್ ಕೇಜ್ರಿವಾಲ್ ವಿರುದ್ಧ 4,089 ಮತಗಳಿಂದ ಗೆದ್ದರು.
109.90 ಕೋಟಿ ರೂ ಆಸ್ತಿ ಹೊಂದಿರುವ ಅತ್ಯಂತ ಶ್ರೀಮಂತ ಮಹಿಳಾ ಅಭ್ಯರ್ಥಿ ಎಎಪಿಯ ಧನ್ವತಿ ಚಾಂಡೇಲಾ, ಮಂಜಿಂದರ್ ಸಿಂಗ್ ವಿರುದ್ಧ ಸ್ಪರ್ಧಿಸಿ ಸೋತರು.
89 ಕೋಟಿ ರೂಪಾಯಿ ಆಸ್ತಿ ಹೊಂದಿರುವ ಆರನೇ ಶ್ರೀಮಂತ ಅಭ್ಯರ್ಥಿ ಎಎಪಿಯ ರಾಮ್ ಸಿಂಗ್ ನೇತಾಜಿ, ಬದರ್‌ಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು
79 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವ ಬಿಜೆಪಿ ನಾಯಕ ರಾಜ್ ಕುಮಾರ್ ಆನಂದ್, ಪಟೇಲ್ ನಗರದಲ್ಲಿ ಸ್ಪರ್ಧಿಸಿ ಸೋತರು.
ANI
RR ವಿರುದ್ಧ ಶತಕ ಸಿಡಿಸಿದ್ದ ಇಶಾನ್ ಕಿಶನ್ LSG ವಿರುದ್ಧ ಗೋಲ್ಡನ್ ಡಕ್