ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಭಾರತದಲ್ಲಿ ಹೆಣ್ಣುಮಕ್ಕಳಿಗಿರುವ 6 ಕಾನೂನು ಹಕ್ಕುಗಳು
PC: Canva
By Reshma Jan 24, 2025
Hindustan Times Kannada
ಹೆಣ್ಣುಮಕ್ಕಳ ಶಿಕ್ಷಣ ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 24 ರಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭ ಭಾರತದಲ್ಲಿರುವ ಹೆಣ್ಣುಮಕ್ಕಳ ಕಾನೂನು ಹಕ್ಕುಗಳ ಬಗ್ಗೆ ತಿಳಿಯೋಣ
PC: Canva
ಭಾರತ ಸರ್ಕಾರವು ಹೆಣ್ಣು ಭ್ರೂಣ ಹತ್ಯೆ ವಿರೋಧ ಕಾನೂನು ಜಾರಿಗೊಳಿಸಿದೆ. ಇದು ಹೆಣ್ಣು ಭ್ರೂಣ ಹತ್ಯೆ ತಡೆಯುವ ಉದ್ದೇಶ ಹೊಂದಿದೆ. ಹೆಣ್ಣು ಮಕ್ಕಳ ಬದುಕುವ ಹಕ್ಕನ್ನು ಪ್ರತಿಪಾದಿಸುವಂತಹ ಕಾನೂನು.
PC: Canva
ಭಾರತ ಸರ್ಕಾರವು ಎಲ್ಲಾ ಹೆಣ್ಣು ಮಕ್ಕಳಿಗೂ ಶಿಕ್ಷಣ ಪಡೆಯುವ ಹಕ್ಕನ್ನು ನೀಡಿದೆ. 6 ರಿಂದ 14 ವರ್ಷದವರೆಗೆ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಪಡೆಯುವ ಹಕ್ಕು ಇದೆ.
PC: Canva
ಪ್ರತಿ ಹೆಣ್ಣು ಮಗುವನ್ನು ಸುರಕ್ಷಿತ ವಾತಾವರಣದಲ್ಲಿ ಬೆಳೆಸುವ ಹಕ್ಕಿದೆ. ಹೆಣ್ಣುಮಕ್ಕಳ ಸುರಕ್ಷತೆಗೆ ಸರ್ಕಾರ ಒತ್ತು ನೀಡುತ್ತದೆ
PC: Canva
ಕುಟುಂಬ ಸದಸ್ಯರಿಂದ ನಿಂದನೆಗೆ ಒಳಗಾಗುವುದು ಕೌಟುಂಬಿಕ ಹಿಂಸಾಚಾರಾ ಕಾಯ್ದೆಯಡಿ ಬರುತ್ತದೆ. ಇದು ಕೌಟುಂಬಿಕ ದೌರ್ಜನ್ಯದಿಂದ ಹೆಣ್ಣುಮಕ್ಕಳನ್ನು ರಕ್ಷಿಸುವ ಹಕ್ಕನ್ನು ಪ್ರತಿಪಾದಿಸುತ್ತದೆ
PC: Canva
ಹೆಣ್ಣುಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ. ಹೆಣ್ಣುಮಕ್ಕಳಿಗೆ ಭಾರತವು ಸಮಾನತೆಯ ಹಕ್ಕನ್ನು ನೀಡಿದೆ. ಇದು ಹುಡುಗರು, ಹುಡುಗಿಯರು ಸಮಾನರು ಎಂಬುದನ್ನು ಪ್ರತಿಪಾದಿಸುತ್ತದೆ
PC: Canva
ಅರಿಶಿನದಲ್ಲಿ ಮಿಂದೆದ್ದ ನಟ ಧನಂಜಯ್ ಮತ್ತು ಧನ್ಯತಾ; ಹಳದಿ ಶಾಸ್ತ್ರ ಫೋಟೋಸ್