ವೈಜ್ಞಾನಿಕ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಭಾರತದ 5 ಮಹಿಳಾ ವಿಜ್ಞಾನಿಗಳಿವರು 

By Reshma
Feb 28, 2024

Hindustan Times
Kannada

ಇಂದು (ಫೆ.28) ರಾಷ್ಟ್ರೀಯ ವಿಜ್ಞಾನ ದಿನ. ಈ ಹೊತ್ತಿನಲ್ಲಿ ಲಿಂಗ ಅಡೆತಡೆಗಳನ್ನೂ ಮೀರಿ, ವೈಜ್ಞಾನಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಭಾರತದ ಪ್ರಸಿದ್ಧ ಮಹಿಳಾ ವಿಜ್ಞಾನಿಗಳ ಬಗ್ಗೆ ತಿಳಿಯಿರಿ. 

ಅಂತರರಾಷ್ಟ್ರೀಯ ಮಹಿಳಾ ದಿನ ಸಮೀಪದಲ್ಲಿರುವ ಈ ಸಮಯದಲ್ಲಿ ಇವರು ಇತರರಿಗೆ ಸ್ಫೂರ್ತಿಯಾಗುವುದರಲ್ಲಿ ಎರಡು ಮಾತಿಲ್ಲ. 

ಡಾ. ಕಿರಣ್‌ ಮಜುಂದಾರ್‌ ಷಾ: ಬಯೋಕಾನ್‌ ಕಂಪನಿ ಸ್ಥಾಪಿಸಿದ ಯಶಸ್ವಿ ಉದ್ಯಮಿ ಕಿರಣ್‌ ಮಜುಂದಾರ್‌ ಪಾ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಚಿರಪರಿಚಿತರು. ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವವರಿಗೆ ಇವರು ಸ್ಫೂರ್ತಿ. 

ಡಾ. ಟೆಸ್ಸಿ ಥಾಮಸ್‌: ಮಿಸೈಲ್‌ ವುಮನ್‌ ಆಫ್‌ ಇಂಡಿಯಾ ಎಂದೇ ಇವರನ್ನು ಕರೆಯಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ಇವರದ್ದು. 

ಡಾ. ಸೌಮ್ಯ ಸ್ವಾಮಿನಾಥನ್‌: ಜಾಗತಿಕ ಆರೋಗ್ಯ ನೀತಿಗಳನ್ನು ರೂಪಿಸುವಲ್ಲಿ ಡಾ. ಸ್ವಾಮಿನಾಥನ್‌ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಚೀಫ್‌ ಸೆಂಟಿಸ್ಟ್‌ ಆಗಿ ಕೆಲಸ ಮಾಡಿದ್ದಾರೆ.

ಡಾ. ವಿದಿತಾ ವೈದ್ಯ: ಇವರು ನರವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಮೆದುಳಿಗೆ ಸಂಬಂಧಿಸಿ ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. 

ಡಾ. ಅನಿತಾ ಗೋಯೆಲ್‌: ನ್ಯಾನೊಬಯೋಸಿಮ್‌ ಕಂಪನಿಯ ಸ್ಥಾಪಕಿಯಾಗಿರುವ ಇವರು ಭೌತವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಎಚ್‌ಐವಿ ಏಡ್ಸ್‌ ರೋಗನಿರ್ಣಯಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. 

ಲೋಕಸಭಾ ಚುನಾವಣೆ 2024 - ಏಪ್ರಿಲ್ 26ಕ್ಕೆ ಮತದಾನ -ಮರೆಯಬೇಡಿ ಮತ್ತೆ... 

@ceo_karnataka