ಭಾರತದಲ್ಲಿ ಪ್ರತಿವರ್ಷ ಮಾರ್ಚ್ 16 ಅನ್ನು ರಾಷ್ಟ್ರೀಯ ಲಸಿಕೆ ದಿನ ಎಂದು ಆಚರಿಸಲಾಗುತ್ತದೆ

By Umesha Bhatta P H
Mar 16, 2025

Hindustan Times
Kannada

 ರಾಷ್ಟ್ರೀಯ ರೋಗನಿರೋಧಕ ದಿನ ಎಂದೂ ಈ ದಿನವನ್ನು ಕರೆಯಲಾಗುತ್ತದೆ

ಲಸಿಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ

ಭಾರತದಲ್ಲಿ ಮೊದಲ ಲಸಿಕೆ ದಿನ ಆರಂಭವಾದದ್ದು 1995ರ ಮಾರ್ಚ್ 16ರಂದು

ಪೋಲಿಯೊ ಹನಿ ಹಾಕುವ ‘ಪಲ್ಸ್‌ ಪೋಲಿಯೊ’ ಅಭಿಯಾನ  ಆರಂಭಿಸಲಾಗಿತ್ತು.

ಲಸಿಕೆಗಳು ಜೀವ ಉಳಿಸುವುದು ಮಾತ್ರವಲ್ಲ, ಆರೋಗ್ಯ ಹಾಗೂ ಜೀವನ ಮಟ್ಟ ಸುಧಾರಿಸುತ್ತವೆ 

ವಿಶೇಷವಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಲಸಿಕೆ ಎಷ್ಟು ಮುಖ್ಯ ಎಂಬ ಅರಿವು ಮೂಡಿಸಲಾಗುತ್ತದೆ

ಲಸಿಕೆ ಅಭಿಯಾನಗಳ ಮೂಲಕ  ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಭಾರತ ಗಮನಾರ್ಹ ಪ್ರಗತಿ ಸಾಧಿಸಿದೆ. 

ಹೆಚ್ಚು ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆಯತ್ತ ಭಾರತ ಸಾಗುತ್ತಿದೆ.

ನಿರಂತರ ಅಭಿಯಾನದ ಬಳಿಕ ಭಾರತವನ್ನು ಪೋಲಿಯೊ ಮುಕ್ತ ಎಂದು ಘೋಷಿಸಲಾಗಿದೆ.

ಐಪಿಎಲ್​ನಲ್ಲಿ ನೂತನ ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ