ಅಚ್ಚರಿಯ ಕಡಲು: ಸಾಗರದ ಆಳವನ್ನು ಆಳುವ ಐದು ಬೃಹತ್ ಸಮುದ್ರ ಜೀವಿಗಳು
ಸಾಗರ ಕೌತುಕ
PEXELS
By Praveen Chandra B Jan 08, 2025
Hindustan Times Kannada
ನಮ್ಮ ಭೂಮಿಯ ಶೇಕಡ 70ಕ್ಕಿಂತಲೂ ಹೆಚ್ಚು ಭಾಗವನ್ನು ಸಮುದ್ರ ಹೊಂದಿದೆ. ಕಡಲಿನ ಆಳದಲ್ಲಿ ಬೃಹತ್ ಜೀವಿಗಳು ಇರುತ್ತವೆ. ಕಡಲಿನಾಳ ಆಳುವ ಇಂತಹ ಜೀವಿಗಳ ಕುರಿತು ಅಚ್ಚರಿಯ ಮಾಹಿತಿ ಇಲ್ಲಿದೆ.
PEXELS, ORIGINAL DIVING
ಸಾಗರದ ಆಳದಲ್ಲಿ ಬೃಹತ್ ಸಮುದ್ರ ಜೀವಿಗಳು ಇರುತ್ತವೆ. ಅವುಗಳಲ್ಲಿ ಟಾಪ್ 5 ಜೀವಿಗಳ ವಿವರ ಇಲ್ಲಿದೆ.
PEXELS
ಬ್ಲೂ ವೇಲ್ಸ್: ಈ ನೀಲಿ ತಿಮಿಂಗಿಲಗಳು 100 ಅಡಿ ಉದ್ದದವರೆಗೆ ಬೆಳೆಯಬಲ್ಲವು. ಸಮುದ್ರ ಜೀವಿಗಳು ಮತ್ತು ಭೂಮಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಜೀವಿಗಳಿಗಿಂತ ಇವು ಬೃಹತ್ ಗಾತ್ರ ಹೊಂದಿವೆ.
PINTEREST
ಸದರ್ನ್ ಎಲಿಫೆಂಟ್ ಸೀಲ್: ಇದು ಸಾಗರದೊಳಗಿನ ಬೃಹತ್ ಜೀವಿ. ಗಂಡು ಸೀಲ್ 20 ಅಡಿವರೆಗೆ ಉದ್ದ ಮತ್ತು ಸುಮಾರು 40 ಟನ್ ತೂಕ ಹೊಂದಿರುತ್ತವೆ.
PINTEREST
ಲೆದರ್ ಬ್ಯಾಕ್ ಸಮುದ್ರ ಆಮೆ: 7 ಅಡಿ ಉದ್ದ ಮತ್ತು 2,000 ಪೌಂಡ್ ತೂಕವಿರುವ ಲೆದರ್ ಬ್ಯಾಕ್ ಸಮುದ್ರ ಆಮೆ ಎಲ್ಲಾ ಆಮೆ ಜಾತಿಗಳಿಗಿಂತ ದೊಡ್ಡದಾಗಿದೆ. ಆಹಾರ ಹುಡುಕುತ್ತ ಇವು ಸಮುದ್ರದ 1,300 ಮೀಟರ್‌ಗಿಂತಲೂ ಹೆಚ್ಚು ಆಳಕ್ಕೆ ಹೋಗುತ್ತವೆ.
PINTEREST
ಬಿಗ್ ಸ್ಕ್ವಿಡ್: ಇವು ಭೂಮಿಯ ಮೇಲಿನ ಅತಿದೊಡ್ಡ ಅಕಶೇರುಕಗಳು. ಸುಮಾರು 46 ಅಡಿ ಉದ್ದದ ತನಕ ಬೆಳೆಯಬಹುದು. 1,100 ಪೌಂಡ್‌ವರೆಗೆ ತೂಕ ಹೊಂದಿರುತ್ತವೆ. ಪ್ರಾಣಿಗಳಲ್ಲಿಯೇ ಅತ್ಯಂತ ದೊಡ್ಡ ಕಣ್ಣುಗಳನ್ನು ಹೊಂದಿವೆ. ಇವುಗಳ ಕಣ್ಣು 10 ಇಂಚುಗಳಷ್ಟು ದೊಡ್ಡದಾಗಿರುತ್ತವೆ.
PINTEREST
ಜಪಾನೀಸ್ ಸ್ಪೈಡರ್ ಕ್ರ್ಯಾಬ್ಸ್: ಈ ಏಡಿಗಳು ಹತ್ತು ಕಾಲುಗಳನ್ನು ಹೊಂದಿವೆ. 12 ಅಡಿಗಳವರೆಗೆ ಇವುಗಳ ಕಾಲು ವ್ಯಾಪಿಸುತ್ತದೆ. 40 ಪೌಂಡ್‌ಗಳಷ್ಟು ತೂಕ ಹೊಂದಿರುತ್ತವೆ.
PINTEREST
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ: ಭಾರತದಲ್ಲಿ ಹೆಣ್ಣುಮಕ್ಕಳಿಗಿರುವ 6 ಕಾನೂನು ಹಕ್ಕುಗಳು