ನ್ಯೂ ಇಯರ್‌ ಪಾರ್ಟಿ ಮೂಡ್‌ನಲ್ಲಿ ಈ ವಿಚಾರಗಳತ್ತ ಗಮನ ಹರಿಸೋದು ಮರಿಬೇಡಿ 

By Reshma
Dec 31, 2023

Hindustan Times
Kannada

ಆಹಾರ ವ್ಯರ್ಥ ಮಾಡಬೇಡಿ: ಹೊಸ ವರ್ಷದ ಮೊದಲ ದಿನ ಆಹಾರ ಹಾಳು ಮಾಡಬೇಡಿ. ಉಳಿದ ಆಹಾರವನ್ನು ಅಗತ್ಯ ಇದ್ದವರಿಗೆ ತಿನ್ನಲು ಕೊಡಿ.

ಡ್ರಿಂಕ್‌ ಅಂಡ್‌ ಡ್ರೈವ್‌ ಬೇಡ: ಅಧ್ಯಯನಗಳ ಪ್ರಕಾರ ಹೆಚ್ಚು ರೋಡ್‌ ಆಕ್ಸಿಡೆಂಟ್‌ ಆಗಿರುವುದು ಹೊಸ ವರ್ಷದ ಸಂದರ್ಭದಲ್ಲೇ ಅಂತೆ. ಹಾಗಾಗಿ ಡ್ರಿಂಕ್‌ ಅಂಡ್‌ ಡ್ರೈವ್‌ ಬೇಡ. ಸುರಕ್ಷತೆಗೆ ಗಮನ ಕೊಡಿ. 

ಸಾಲ ಕೊಡಬೇಡಿ: ಕೆಲವು ನಂಬಿಕೆಗಳ ಪ್ರಕಾರ ಹೊಸ ವರ್ಷದ ದಿನದಂದು ಯಾರಿಗೂ ಸಾಲ ಕೊಡಬಾರದು. ಇದರಿಂದ ನೀವು ವರ್ಷವಿಡೀ ತೊಂದರೆ ಅನುಭವಿಸಬೇಕಾಗಬಹುದು. 

ಕಣ್ಣೀರು ಹಾಕದಿರಿ: ಹೊಸ ವರ್ಷ ಎಂದರೆ ಹೊಸ ಆರಂಭ. ಈ ದಿನ ಯಾವುದೇ ಕಾರಣಕ್ಕೂ ಕಣ್ಣೀರು ಹಾಕಬೇಡಿ, ಇದು ವರ್ಷಪೂರ್ತಿ ಕಣ್ಣೀರು ಸುರಿಸುವಂತೆ ಮಾಡಬಹುದು. 

ಮನೆ ಸ್ವಚ್ಛ ಮಾಡುವುದು ಬೇಡ: ಹಲವು ದೇಶಗಳಲ್ಲಿ ಹೊಸ ವರ್ಷದ ದಿನ ಮನೆ ಸ್ವಚ್ಛ ಮಾಡುವುದರಿಂದ ಅದೃಷ್ಟ ಮನೆಯಿಂದಾಚೆಗೆ ಹೋಗುತ್ತದೆ ಎಂಬ ನಂಬಿಕೆ ಇದೆ. 

ಮಲಗಿಕೊಂಡೇ ಇರಬೇಡಿ: ಯಾವುದಾದರೂ ಮನಸ್ಸಿಗೆ ಖುಷಿ ಕೊಡುವ, ಸಾಹಸಮಯ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ. ಹೊಸ ಆಶಾಭಾವನೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸಿ. 

ರಾತ್ರಿಯಿಡೀ ಪಾರ್ಟಿ ಮಾಡುವುದು ಒಳ್ಳೆಯದಲ್ಲ: ನ್ಯೂ ಇಯರ್‌ ಈವ್‌ ದಿನ ನಮ್ಮ ಪ್ರೀತಿಪಾತ್ರರ ಜೊತೆ ಪಾರ್ಟಿ ಮಾಡುವುದು ಸಹಜ. ಆದರೆ ರಾತ್ರಿಯಿಡೀ ಪಾರ್ಟಿ ಮಾಡಬೇಡಿ. ಇದರಿಂದ ಹೊಸ ವರ್ಷದ ದಿನ ನಿಮ್ಮ ಮೂಡ್‌ ಹಾಳಾಗಬಹುದು. 

ಅತಿಯಾದ ಕುಡಿತ ಬೇಡ: ಅತಿಯಾಗಿ ಕುಡಿಯುವ ಅಭ್ಯಾಸ ಬೇಡ. ಇದು ವರ್ಷಪೂರ್ತಿ ಮುಂದುವರಿಯಬಹುದು.

ವಾದ ವಿವಾದಗಳಿಂದ ದೂರವಿರಿ: ಹೊಸ ವರ್ಷದ ಆರಂಭವನ್ನು ಯಾವುದೇ ಕಾರಣಕ್ಕೂ ವಾದ ವಿವಾದಗಳಿಂದ ಆರಂಭಿಸಬೇಡಿ. 

ಹೊರಗಡೆ ತಿನ್ನದಿರುವುದು ಉತ್ತಮ: ಸಾಧ್ಯವಾದಷ್ಟು ಮನೆಯಲ್ಲೇ ನಿಮ್ಮಿಷ್ಟದ ಖಾದ್ಯಗಳನ್ನು ತಯಾರಿಸಿ ತಿನ್ನಿ. ಹೊರಗಡೆ ಹೋದರೂ ಆರೋಗ್ಯಕರ ಆಹಾರ ಸೇವನೆಗೆ ಒತ್ತು ನೀಡಿ. 

ಪುಷ್ಪ 2 ಬಿಡುಗಡೆಗೆ ಮುನ್ನ ಶ್ರೀಲೀಲಾ ನಟನೆಯ ಈ ಸಿನಿಮಾಗಳನ್ನು ಕಣ್ತುಂಬಿಕೊಳ್ಳಿ