2025ರಲ್ಲಿ ಮೇಷ ರಾಶಿಯವರಿಗೆ ಯಾವ ತಿಂಗಳು ಮಂಗಳಕರ?  

By Reshma
Dec 17, 2024

Hindustan Times
Kannada

2025ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆಗಳು ಆರಂಭವಾಗಿವೆ. ಹೊಸ ವರ್ಷವು ಮೇಷ ರಾಶಿಯವರಿಗೆ ಹಲವು ಅವಕಾಶಗಳನ್ನು ನೀಡುತ್ತದೆ. ಆದರೆ ಈ ವರ್ಷ ಸವಾಲುಗಳಿಂದಲೂ ಕೂಡಿರುತ್ತದೆ 

2025ರಲ್ಲಿ ಮೇಷ ರಾಶಿಯವರಿಗೆ ಯಾವ ತಿಂಗಳಲ್ಲಿ ಶುಭವಾಗಲಿದೆ ಎಂಬುದನ್ನು ನೋಡೋಣ 

ಜ್ಯೋತಿಷಿಗಳಾದ ಡಾ. ಜೆ. ಎಸ್‌. ಪಾಂಡೆ ಅವರ ಪ್ರಕಾರ 2025ರಲ್ಲಿ ಮೇಷ ರಾಶಿಯವರಿಗೆ ಜನವರಿ, ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳು ತುಂಬಾ ಒಳ್ಳೆಯದು 

2025ರ ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳುಗಳಲ್ಲಿ ಮೇಷ ರಾಶಿಯವರ ಆರ್ಥಿಯ ಸ್ಥಿತಿ ಬಲವಾಗಿರುತ್ತದೆ. ಕೌಟುಂಬಿಕ ಜೀವನವು ಸಂತೋಷದಿಂದ ಕೂಡಿರುತ್ತದೆ 

ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಮೇಷ ರಾಶಿಯವರಿಗೆ ವೃತ್ತಿಪರ ಸಹಯೋಗ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ 

ಆದರೆ 2025ರಲ್ಲಿ ಶನಿ ಸಂಕ್ರಮಣದಿಂದಾಗಿ ಮಾರ್ಚ್ ಹಾಗೂ ಡಿಸೆಂಬರ್ ತಿಂಗಳು ಸವಾಲಾಗಿರಬಹುದು. ಈ ಸಮಯದಲ್ಲಿ ಖರ್ಚು ಹೆಚ್ಚಾಗಬಹುದು. ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು 

ಹಾಗಾಗಿ ಮೇಷ ರಾಶಿಯವರು ಮಾರ್ಚ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಜಾಗರೂಕರಾಗಿರಬೇಕು 

ಮಾರ್ಚ್ ತಿಂಗಳಲ್ಲಿ ಮೇಷ ರಾಶಿಯವರಿಗೆ ಒತ್ತಡ, ಆಯಾಸದಂತಹ ಸಮಸ್ಯೆ ಕಾಡುತ್ತದೆ. ಉಳಿದ ದಿನಗಳಲ್ಲಿ ಆರೋಗ್ಯ ಸಾಮಾನ್ಯವಾಗಿರುತ್ತದೆ 

2025ರ ಹೊಸ ವರ್ಷದ ಆರಂಭವು ಮೇಷ ರಾಶಿಯವರಿಗೆ ಆರ್ಥಿಕ ಪ್ರಯೋಜನಗಳನ್ನು ತರುತ್ತದೆ, ಮಾರ್ಚ್ ತಿಂಗಳಲ್ಲಿ ಖರ್ಚಿನ ಮೇಲೆ ನಿಗಾ ವಹಿಸಬೇಕು 

ಈ ಮಾಹಿತಿಯು ನಂಬಿಕೆ, ಧಾರ್ಮಿಕ ಗ್ರಂಥಗಳು ಹಾಗೂ ವಿವಿಧ ಮಾಧ್ಯಮಗಳಲ್ಲಿ ಸಂಗ್ರಹಿಸಿದ ಮಾಹಿತಿಯಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ

ದೇಹಾರೋಗ್ಯ ವೃದ್ಧಿಸುವ  ಹುಳಿ, ಕಹಿ ರುಚಿ ಹೊಂದಿರುವ ಆಹಾರಗಳು