New Year Trip: ಹೊಸ ವರ್ಷದ ಸ್ವಾಗತಕ್ಕೆ ಭಾರತದ 5 ಬಜೆಟ್​-ಸ್ನೇಹಿ ತಾಣಗಳಿವು 

By Jayaraj
Dec 15, 2024

Hindustan Times
Kannada

ಹೊಸ ವರ್ಷ ಸಮೀಪಿಸುತ್ತಿದೆ. ಅದ್ಧೂರಿಯಾಗಿ ಕ್ಯಾಲೆಂಡರ್‌ ವರ್ಷದ ಸ್ವಾಗತಕ್ಕೆ ಯುವ ಜನತೆ ಸಜ್ಜಾಗಿದ್ದಾರೆ.

ಈ ಬಾರಿ ನಿವ್‌ ಇಯರ್‌ ಟ್ರಿಪ್‌ ಎಲ್ಲಿಗೆ ಮಾಡೋಣ ಎಂಬ ಯೋಚನೆ ನಿಮ್ಮದಾಗಿದ್ದರೆ ಈ ಸಲಹೆ ನಿಮಗಾಗಿ.

ಕರ್ನಾಟಕದ ಹೊರಗೆ ಕಡಿಮೆ ಬಜೆಟ್‌ನಲ್ಲಿ ಹೊಸ ವರ್ಷದ ಸ್ವಾಗತಕ್ಕೆಐದು ಬೆಸ್ಟ್‌ ಸ್ಥಳಗಳ ಪಟ್ಟಿ ಇಲ್ಲಿದೆ. 

ಗೋವಾ: ತಡರಾತ್ರಿಯ ಪಾರ್ಟಿ, ಕಡಿಮೆ ಬೆಲೆಗೆ ಮದ್ಯ, ಸುಂದರ ಬೀಚ್‌ ಸೇರಿದಂತೆ ಗೋವಾ ಪ್ರವಾಸಿಗರ ಸ್ವರ್ಗವಾಗಿದೆ.

ಉದಯಪುರ: ಐಷಾರಾಮಿ ಹೋಟೆಲ್‌ಗಳು, ಹೊಸ ವರ್ಷದ ಪಾರ್ಟಿ ಸೇರಿದಂತೆ ಈ ವರ್ಷ ಒಂದು ಹೊಸ ಜಾಗ ಹುಡುಕುತ್ತಿದ್ದರೆ ಉದಯಪುರ ಸೂಕ್ತ.

ಪಾಂಡಿಚೇರಿ: ದಕ್ಷಿಣ ಭಾರತದ ಕೇಂದ್ರಾಡಳಿತ ಪ್ರದೇಶ ಸುಂದರ ಬೀಚ್‌ಗಳನ್ನು ಹೊಂದಿದೆ. ಕಡಿಮೆ ಬಜೆಟ್‌ನಲ್ಲಿ ಇಲ್ಲಿ ಸಂಭ್ರಮಿಸಬಹುದು.

ಅಲೆಪ್ಪಿ: ಕೇರಳದ ಈ ಜಾಗ ಪ್ರಕೃತಿ ಪ್ರಿಯರ ಸ್ವರ್ಗ. ನಿಮಗೆ ಶಾಂತಿಯುತ ವಾತಾವರಣ ಬೇಕಿದ್ದರೆ ಅಲೆಪ್ಪಿಯ ಹಿನ್ನೀರಿನಲ್ಲಿ ಸಂಭ್ರಮಿಸಬಹುದು.

ಜೈಪುರ: ಗುಲಾಬಿ ನಗರಿಯಲ್ಲಿ ಕಡಿಮೆ ಬೆಲೆಯ ಹೋಟೆಲ್‌ ಲಭ್ಯವಿದ್ದು, ಅದ್ಧೂರಿಯಾಗಿ ಹೊಸ ವರ್ಷ ಆಚರಿಸಬಹುದು.

ಇದರ ಹೊರತಾಗಿ ಮನಾಲಿ, ರಿಶಿಕೇಶ್‌, ಕೋಲ್ಕತ್ತಾ, ಚಂಡೀಗಢ ಮೊದಲಾದ ಸ್ಥಳಗಳಲ್ಲಿ ಹೊಸ ವರ್ಷ ಆಚರಿಸಬಹುದು.

All photos: Pixabay

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಪಂದ್ಯವಾಡಿದ ಕ್ರಿಕೆಟಿಗರು