ಡಿಸೆಂಬರ್ 1ರಿಂದ ಮೊಬೈಲ್‌ಗೆ ಒಟಿಪಿ ಬರೋಲ್ವ? ಟ್ರಾಯ್ ಹೊಸ ನಿಯಮ
By Praveen Chandra B
Nov 28, 2024
Hindustan Times
Kannada
ಸ್ಪ್ಯಾಮ್ ಎಸ್‌ಎಂಎಸ್, ಫಿಶಿಂಗ್, ಸೈಬರ್ ವಂಚನೆ ತಡೆಗಟ್ಟಲು ಟ್ರಾಯ್ ನಿಯಮ ರೂಪಿಸಿದೆ.
ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ, ಬಿಎಸ್‌ಎನ್‌ಎಲ್‌ನಂತಹ ದೂರಸಂಪರ್ಕ ಕಂಪನಿಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ.
ವಾಣಿಜ್ಯ ಸಂದೇಶಗಳು, ಒಟಿಪಿ ಸಂದೇಶಗಳಲ್ಲಿ ವಂಚನೆ ತಡೆಗಟ್ಟಲು ಹಲವು ಕ್ರಮಗಳನ್ನು ತಿಳಿಸಿದೆ.
ಈ ರೀತಿ ಸ್ಪ್ಯಾಮ್ ಸಂದೇಶ, ಸ್ಪ್ಯಾಮ್ ಒಟಿಪಿ ಕಳುಹಿಸುವವರನ್ನು ಪತ್ತೆಹಚ್ಚಲು ಸಾಧ್ಯವಾಗುವಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ.
ಈ ನಿಯಮ ಆಗಸ್ಟ್ 1ರಿಂದ ಜಾರಿಗೆ ತರಲು ಹೇಳಲಾಗಿತ್ತು. ಬಳಿಕ ಸೆಪ್ಟೆಂಬರ್‌ಗೆ ಮುಂದೂಡಲಾಗಿತ್ತು.
ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ, ಬಿಎಸ್‌ಎನ್‌ಎಲ್ ಕಂಪನಿಗಳು ಸಮಯಾವಕಾಶ ಕೇಳಿದ್ದವು. ಹೀಗಾಗಿ ಡಿಸೆಂಬರ್ 1ರಿಂದ ಜಾರಿಗೆ ಬರಲಿದೆ.
ಡಿಸೆಂಬರ್ 1ರಿಂದ ಅಗತ್ಯ ಒಟಿಪಿಗಳು ಬರಬಹುದಾಗಿದ್ದರೂ, ಕೊಂಚ ವಿಳಂಬವಾಗಿ ಬರುವ ಸಾಧ್ಯತೆ ಇದೆ.
ಆನ್‌ಲೈನ್ ವಂಚಕರು ಒಟಿಪಿ ಕಳುಹಿಸುವುದನ್ನು ತಡೆಯಲು ಇದು ನೆರವಾಗಲಿದೆ.
ಪುಷ್ಪ 2 ಡಿಸೆಂಬರ್ 5ರಂದು ಬಿಡುಗಡೆ, ರಶ್ಮಿಕಾ ಮಂದಣ್ಣರ ಖುಷಿ ನೋಡಿ
Instagram/rashmika_mandanna
ಮುಂದಿನ ಸ್ಟೋರಿ ಕ್ಲಿಕ್ ಮಾಡಿ