ಸಂಖ್ಯಾಶಾಸ್ತ್ರ: ಈ ದಿನಾಂಕದಂದು ಜನಿಸಿದವರಿಗೆ ಮೈಯೆಲ್ಲಾ ಕಣ್ಣು
By Raghavendra M Y
Jul 28, 2024
Hindustan Times
Kannada
ಸಂಖ್ಯಾಶಾಸ್ತ್ರದಲ್ಲಿ ಯಾವುದೇ ವ್ಯಕ್ತಿಯ ಸ್ವಭಾವ, ಭವಿಷ್ಯ ಮತ್ತು ವ್ಯಕ್ತಿತ್ವವನ್ನು ರಾಡಿಕ್ಸ್ ಸಂಖ್ಯೆ ಮೂಲಕ ತಿಳಿಯಬಹುದು
ಸಂಖ್ಯೆಗಳಿಗೆ ವಿಶೇಷ ಪ್ರಾಮುಖ್ಯವನ್ನು ನೀಡಲಾಗುತ್ತದೆ. ರಾಡಿಕ್ಸ್ ಸಂಖ್ಯೆ 5 ರ ಬಗ್ಗೆ ತಿಳಿಯೋಣ
ಯಾವುದೇ ತಿಂಗಳ 5, 14 ಮತ್ತು 23 ರಂದು ಜನಿಸಿದ ಜನರು 5 ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ
ಇವರ ಆಡಳಿತ ಗ್ರಹ ಬುಧ, ಇದನ್ನು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ
ಸಂಖ್ಯಾಶಾಸ್ತ್ರದ ಪ್ರಕಾರ, ಬುಧನ ಪ್ರಭಾವದಿಂದಾಗಿ ರಾಡಿಕ್ಸ್ ಸಂಖ್ಯೆ 5 ರ ಜನರು ತುಂಬಾ ಬುದ್ಧಿವಂತರು ಮತ್ತು ಧೈರ್ಯಶಾಲಿಗಳು
5ನೇ ಸಂಖ್ಯೆಯ ಜನರು ಯಾವುದೇ ನಿರ್ಧಾರವನ್ನು ತ್ವರಿತವಾಗಿ ತೆಗೆದುಕೊಳ್ಳುವುದಿಲ್ಲ. ಈ ಜನರು ತೀರ್ಮಾನಕ್ಕೆ ಬರುವ ಮೊದಲು ತುಂಬಾ ಯೋಚಿಸುತ್ತಾರೆ
ಈ ರಾಡಿಕ್ಸ್ ಸಂಖ್ಯೆಯ ಜನರು ತಮ್ಮ ಜೀವನದಲ್ಲಿ ಪೂರ್ಣ ಉತ್ಸಾಹದಿಂದ ಮುನ್ನಡೆಯುತ್ತಾರೆ. ಎಲ್ಲಾ ರೀತಿಯ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುತ್ತಾರೆ
ಜೀವನದಲ್ಲಿ ಎದುರಾಗುವ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಧೈರ್ಯದಿಂದ ಎದುರಿಸುತ್ತಾರೆ
5ನೇ ಸಂಖ್ಯೆಯನ್ನು ಹೊಂದಿರುವ ಜನರು ಉತ್ತಮ ಆರ್ಥಿಕ ಜೀವನವನ್ನು ಹೊಂದಿರುತ್ತಾರೆ. ಸಾಕಷ್ಟು ಹಣವನ್ನೂ ಗಳಿಸುತ್ತಾರೆ
ಉದ್ಯೋಗ, ವ್ಯಾಪಾರ ಹಾಗೂ ಉದ್ಯಮದಲ್ಲಿ ಯಶಸ್ಸು ಪಡೆಯುತ್ತಾರೆ. ಮ್ಯಾನೇಕರ್, ಲಾಯರ್ ಸೇರಿದಂತೆ ಉತ್ತಮ ಹುದ್ದೆಗಳನ್ನು ಪಡೆಯುತ್ತಾರೆ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ