ಸಂಖ್ಯಾಶಾಸ್ತ್ರ: ಮದುವೆಯ ದಿನಾಂಕದಿಂದ ನಿಮ್ಮ ಭವಿಷ್ಯ ತಿಳಿದುಕೊಳ್ಳಿ

Pexels

By Priyanka Gowda
Mar 18, 2025

Hindustan Times
Kannada

ಮದುವೆಯ ಸಂಖ್ಯಾಶಾಸ್ತ್ರ

ಮದುವೆಯ ನಂತರ, ಪ್ರತಿಯೊಬ್ಬರೂ ಭವಿಷ್ಯದಲ್ಲಿ ತಮ್ಮ ಸಂಗಾತಿಯೊಂದಿಗೆ ಹೇಗೆ ಸಮಯ ಕಳೆಯುತ್ತಾರೆ ಎಂದು ತಿಳಿಯಲು ಬಯಸುತ್ತಾರೆ. ಸಂಖ್ಯಾಶಾಸ್ತ್ರದಲ್ಲಿ ಈ ಪ್ರಶ್ನೆಗೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು.

Pexels

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ವೈವಾಹಿಕ ಜೀವನವು ಅವರ ಮದುವೆಯ ದಿನಾಂಕಕ್ಕೆ ನೇರವಾಗಿ ಸಂಬಂಧಿಸಿದೆ.

Pexels

ಮದುವೆಯ ದಿನಾಂಕದಿಂದ ನಿಮ್ಮ ವೈವಾಹಿಕ ಜೀವನದ ಬಗ್ಗೆ ತಿಳಿದುಕೊಳ್ಳಬಹುದು.

Pexels

ನೀವು 1, 10, 19 ಮತ್ತು 28 ರಂದು ವಿವಾಹವಾದರೆ, ಸಂಖ್ಯಾಶಾಸ್ತ್ರದಲ್ಲಿ ಅದನ್ನು ಮೂಲ ಸಂಖ್ಯೆ 1 ಎಂದು ಪರಿಗಣಿಸಲಾಗುತ್ತದೆ. ಈ ದಿನಾಂಕಗಳಲ್ಲಿ ಮದುವೆಯಾದರೆ, ಸಂಗಾತಿಯೊಂದಿಗೆ ಯಾವಾಗಲೂ ಸ್ವಲ್ಪ ಜಗಳ ಇರುತ್ತದೆ.

Pexels

ಯಾವುದೇ ತಿಂಗಳ 2, 11, 20 ಮತ್ತು 29ರಂದು ನಡೆಯುವ ವಿವಾಹದ ಮೂಲ ಸಂಖ್ಯೆ 2 ಆಗಿರುತ್ತದೆ. ಈ ದಿನಾಂಕಗಳ್ಲಲಿ ಮದುವೆಯಾಗುವವರಿಗೆ ತಮ್ಮ ಸಂಗಾತಿಯಿಂದ ಬಹಳಷ್ಟು ಪ್ರೀತಿ ಸಿಗುತ್ತದೆ.

Pexels

ನೀವು 3, 12, 21 ಮತ್ತು 30 ರಂದು ವಿವಾಹವಾದರೆ, ಅದರ ಮೂಲ ಸಂಖ್ಯೆ 3 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ವೈವಾಹಿಕ ಜೀವನವು ಸಂತೋಷದಿಂದ ತುಂಬಿರುತ್ತದೆ.

Pexels

4, 13, 22 ಮತ್ತು 31 ರಂದು ಮದುವೆಯಾಗಿದ್ದರೆ ಮೂಲ ಸಂಖ್ಯೆ 4. ಈ ದಿನಾಂಕಗಳಲ್ಲಿ ಮದುವೆಯಾಗುವವರು ತಮ್ಮ ಸಂಗಾತಿ ಹೇಳುವ ಎಲ್ಲವನ್ನೂ ಕೇಳುವ ಮೂಲಕ ಉತ್ತಮ ಜೀವನವನ್ನು ನಡೆಸುತ್ತಾರೆ.

Pixabay

ಯಾವುದೇ ತಿಂಗಳ 5, 14 ಮತ್ತು 23ರಂದು ಮದುವೆಯಾಗಿದ್ದರೆ ಮೂಲ ಸಂಖ್ಯೆ 5 ಆಗಿರುತ್ತದೆ. ಈ ದಿನಾಕಗಳಲ್ಲಿ ಮದುವೆಯಾದವರು ತಮ್ಮ ಸಂಗಾತಿಯೊಂದಿಗೆ ಸಣ್ಣ ಮನಸ್ತಾಪಗಳನ್ನು ಹೊಂದಿರುತ್ತಾರೆ.

Pixabay

6, 15 ಮತ್ತು 24 ರಂದು ವಿವಾಹವಾದರೆ, ಮೂಲ ಸಂಖ್ಯೆ 6 ಆಗಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಸಂಗಾತಿಯೊಂದಿಗೆ ಒಳ್ಳೆಯ ಸಮಯವನ್ನು ಕಳೆಯುತ್ತೀರಿ.

Pixabay

ಯಾವುದೇ ತಿಂಗಳ 7, 16 ಮತ್ತು 25 ರಂದು ವಿವಾಹವಾದರೆ ಮೂಲ ಸಂಖ್ಯೆ 7 ಆಗಿರುತ್ತದೆ. ಇವರ ವೈವಾಹಿಕ ಜೀವನವು ಯಶಸ್ವಿಯಾಗುತ್ತದೆ.

Pexels

8, 17 ಮತ್ತು 26 ರಂದು ವಿವಾಹವಾದ್ರೆ ಮೂಲ ಸಂಖ್ಯೆ 8 ಆಗಿರುತ್ತದೆ. ಸಂಗಾತಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ.

Pexels

9, 18, 27 ರಂದು ನಡೆಯುವ ವಿವಾಹದ ಮೂಲ ಸಂಖ್ಯೆ 9 ಆಗಿರುತ್ತದೆ. ವೈವಾಹಿಕ ಜೀವನದಲ್ಲಿ ಯಾವಾಗಲೂ ವ್ಯತ್ಯಾಸ ಅಥವಾ ಗೊಂದಲ ಇರುತ್ತದೆ.

Pexels

ಈ ಮಾಹಿತಿಯು ಧಾರ್ಮಿಕ ಗ್ರಂಥಗಳು, ನಂಬಿಕೆಗಳು ಮತ್ತು ಅಂತರ್ಜಾಲದ ಮಾಹಿತಿಯನ್ನು ಆಧರಿಸಿದೆ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ಭಾರತದ ಮಾರುಕಟ್ಟೆಗೆ ಈ ವರ್ಷ ಪ್ರವೇಶಿಸಲಿರುವ ಎಲೆಕ್ಟ್ರಿಕ್ ಕಾರುಗಳು