ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗ, ಜನ್ಮ ದಿನಾಂಕ ಆಧರಿಸಿ ಯಾವುದೇ ವ್ಯಕ್ತಿಯ ಗುಣ ಸ್ವಭಾವ ಅಳೆಯಲಾಗುತ್ತದೆ
ಯಾವುದೇ ತಿಂಗಳ 3,12, 21 ಅಥವಾ 30 ರಂದು ಜನಿಸಿದ ಹುಡುಗಿಯರು ರಾಡಿಕ್ಸ್ ಸಂಖ್ಯೆ 3ನ್ನು ಹೊಂದಿರುತ್ತಾರೆ
ಜ್ಯೋತಿಷ್ಯದ ಪ್ರಕಾರ ಸಂಖ್ಯೆ 3ನ್ನು ಬೃಹಸ್ಪತಿ ಪ್ರತಿನಿಧಿಸುತ್ತಾನೆ
3ನೇ ತಾರೀಖಿನಂದು ಜನಿಸಿದ ಯುವತಿಯರು ಧೈರ್ಯಶಾಲಿಗಳು, ಬಹಳ ಬುದ್ಧಿವಂತರು
ಯಾವುದೇ ಚಾಲೆಂಜಿಂಗ್ ಕೆಲಸವನ್ನು ಸ್ವೀಕರಿಸಲು ಕೂಡಾ ಈ ಯುವತಿಯರು ಹಿಂಜರಿಯುವುದಿಲ್ಲ
ಈ ಹುಡುಗಿಯರು ಹಟಮಾರಿಗಳಾದರೂ ಬಹಳ ಮೃದು ಸ್ವಭಾವದವರು, ಯಾರೇ ಕೇಳಿದರೂ ಮನಸ್ಸಿನಿಂದ ಸಹಾಯ ಮಾಡುತ್ತಾರೆ
ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಇತರರ ಮುಂದೆ ತಲೆ ಬಾಗುವುದಿಲ್ಲ, ಸೋಲನ್ನು ಒಪ್ಪಿಕೊಳ್ಳುವುದಿಲ್ಲ
ಬಹಳ ಮೊಂಡು ಸ್ವಭಾವದವರು, ಒಂದು ಕೆಲಸ ಕೈಗೆತ್ತಿಕೊಂಡರೆ ಅದು ಮುಗಿಯುವವರೆಗೂ ಸುಮ್ಮನೆ ಕೂರುವುದಿಲ್ಲ
ತಮ್ಮಲ್ಲಿರುವ ಪ್ರತಿಭೆಯಿಂದಲೇ ಈ ಯುವತಿಯರು ಇತರರನ್ನು ಆಕರ್ಷಿಸುತ್ತಾರೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.