ಈ ರಾಡಿಕ್ಸ್‌ ನಂಬರ್‌ ಜನರಿಗೆ ಸೂರ್ಯದೇವನ ವಿಶೇಷ ಆಶೀರ್ವಾದ ಇರಲಿದೆ

By Rakshitha Sowmya
Jan 27, 2025

Hindustan Times
Kannada

ಸಂಖ್ಯಾಶಾಸ್ತ್ರದ ಪ್ರಕಾರ ಗ್ರಹಗಳ ರಾಜ ಸೂರ್ಯನ ಮೆಚ್ಚಿನ ಸಂಖ್ಯೆ 1 ಆಗಿದೆ, ಆದ್ದರಿಂದ ಈ ರಾಡಿಕ್ಸ್‌ ನಂಬರ್‌ನವರಿಗೆ ಸೂರ್ಯನ ವಿಶೇಷ ಅನುಗ್ರಹ ದೊರೆಯಲಿದೆ

ಯಾವುದೇ ತಿಂಗಳ 1,10,19 ಅಥವಾ 28 ರಂದು ಜನಿಸಿದವರು ರಾಡಿಕ್ಸ್ ನಂಬರ್‌ 1ಕ್ಕೆ ಸೇರುತ್ತಾರೆ

ಈ ಜನರು ತಮ್ಮ ಜೀವನದಲ್ಲಿ ಯಾವುದೇ ಕಷ್ಟಗಳಿಗೆ ಹೆದರುವುದಿಲ್ಲ, ಅವರ ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿರುತ್ತದೆ

ಯಾವುದೇ ದೊಡ್ಡ ಜವಾಬ್ದಾರಿ ತಮಗೆ ದೊರೆತರೂ ಅದನ್ನು ಮಾಡಲು ಹೆದರುವುದಿಲ್ಲ

ಇವರು ಬಹಳ ಬುದ್ಧಿವಂತರು, ಇತರರೊಂದಿಗೆ ಬಹಳ ಸುಲಭವಾಗಿ ಬೆರೆಯುತ್ತಾರೆ

ರಾಡಿಕ್ಸ್‌ 1ರ ಜನರು ಬಹಳ ಶಕ್ತಿವಂತರು, ಗುರಿಗಳನ್ನು ಸಾಧಿಸಲು ಕಠಿಣ ಪರಿಶ್ರಮ ವಹಿಸುತ್ತಾರೆ

ಗುರಿಯನ್ನು ಸಾಧಿಸಲು ಎಷ್ಟೇ ದೊಡ್ಡ ರಿಸ್ಕ್‌ ತೆಗೆದುಕೊಳ್ಳಲು ಕೂಡಾ ಇವರು ಹೆದರುವುದಿಲ್ಲ

ಶನಿದೇವನ ಸಂಖ್ಯೆ 8 ಆಗಿದೆ, ಸೂರ್ಯನಿಗೂ ಶನಿಗೂ ವೈರತ್ವ ಇರುವುದರಿಂದ 1 ಹಾಗೂ 8 ಸಂಖ್ಯೆಯವರಿಗೂ ಹೊಂದಾಣಿಕೆ ಆಗುವುದಿಲ್ಲ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು

Flickr