ಈ ತಾರೀಖಿನಂದು ಜನಿಸಿದವರು ಯಶಸ್ವಿ ಬಿಸ್ನೆಸ್‌ಮ್ಯಾನ್ ಆಗಿ ಹೆಸರು ಮಾಡುತ್ತಾರೆ
By Rakshitha Sowmya May 25, 2024
Hindustan Times Kannada
ಸಂಖ್ಯಾಶಾಸ್ತ್ರದಲ್ಲಿ ಪ್ರತಿ ಮೂಲ ಸಂಖ್ಯೆಯ ಬಗ್ಗೆಯೂ ಹೇಳಲಾಗಿದೆ. ಇವರುಗಳಲ್ಲಿ ರಾಡಿಕ್ಸ್ ನಂಬರ್ 9ರಲ್ಲಿ ಜನಿಸಿದವರು ಬಹಳ ಅದೃಷ್ಟಶಾಲಿಗಳು
ನ್ಯೂಮರಾಲಜಿ ಪ್ರಕಾರ ಯಾವುದೇ ತಿಂಗಳ 9, 18, 27 ರಂದು ಜನಿಸಿದವರು ಮೂಲ ಸಂಖ್ಯೆ 9ನ್ನು ಹೊಂದಿರುತ್ತಾರೆ
9 ರಾಡಿಕ್ಸ್ ನಂಬರಿನ ಆಡಳಿತ ಗ್ರಹ ಮಂಗಳ. ಅಂಗಾರಕನ ಅನುಗ್ರಹದಿಂದ ಈ ರಾಶಿಯಲ್ಲಿ ಜನಿಸಿದವರು ಉದ್ಯಮಿಗಳಾಗಿ ಹೆಸರು ಗಳಿಸುತ್ತಾರೆ
ಈ ದಿನಾಂಕದಂದು ಜನಿಸಿದವರು ಇತರರಿಗೆ ಯಾವಾಗಲೂ ಸ್ಫೂರ್ತಿಯಾಗಿರುತ್ತಾರೆ. ಇವರ ಉತ್ಸಾಹ ಮತ್ತು ಧೈರ್ಯ ಎಲ್ಲರಿಗೂ ಮಾದರಿ
ಈ ಜನರು ಸ್ವಭಾವತ: ಬಹಳ ಉತ್ಸಾಹಿಗಳಾಗಿರುತ್ತಾರೆ. ಯಾವುದೇ ಪರಿಸ್ಥಿತಿ ಇದ್ದರೂ ಹೆದರದೆ ಎಲ್ಲವನ್ನೂ ಧೈರ್ಯದಿಂದ ನಿಭಾಯಿಸುತ್ತಾರೆ
ಈ ಸಂಖ್ಯೆಯ ಜನರಿಗೆ ಎಂದಿಗೂ ಹಣದ ಕೊರತೆ ಎದುರಾಗುವುದಿಲ್ಲ, ತಾಳ್ಮೆ ಹಾಗೂ ಕಠಿಣ ಪರಿಶ್ರಮ ಇವರ ಮತ್ತೊಂದು ಗುಣ
ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬರುತ್ತಾರೆ, ಯಶಸ್ವಿ ಉದ್ಯಮಿಗಳಾಗಿ ಬೆಳೆಯುತ್ತಾರೆ
ಯಾವುದೇ ವ್ಯವಹಾರವಾದರೂ ಬುದ್ಧಿವಂತಿಕೆಯಿಂದ ನಿಭಾಯಿಸುತ್ತಾರೆ. ಇವರಿಗೆ ಹಣ ಸಂಪಾದನೆ ಕಷ್ಟದ ಕೆಲಸವಲ್ಲ.
9 ತಾರೀಖಿನಂದು ಜನಿಸಿದವರು ಸ್ವಲ್ಪ ಕೋಪಿಷ್ಠರು. ಇದರಿಂದ ಅವರು ಸಣ್ಣ ಪುಟ್ಟ ಸಮಸ್ಯೆಯನ್ನೂ ಎದುರಿಸಬಹುದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.