ಈ ರಾಡಿಕ್ಸ್ ಸಂಖ್ಯೆಯವರು 2025 ರಲ್ಲಿ ಗಣೇಶನನ್ನು ಪೂಜಿಸಿದರೆ ಸಿಗುವ ಲಾಭಗಳಿವು

By Raghavendra M Y
Jan 03, 2025

Hindustan Times
Kannada

2025 ರಲ್ಲಿ ರಾಡಿಕ್ಸ್ ಸಂಖ್ಯೆ 4 ರ ಜೀವನ, ವ್ಯಕ್ತಿತ್ವ ಹಾಗೂ ಭವಿಷ್ಯ ಹೇಗಿರುತ್ತೆ ಎಂಬುದನ್ನು ತಿಳಿಯೋಣ

ಸಂಖ್ಯಾಶಾಸ್ತ್ರದ ಪ್ರಕಾರ, ಯಾವುದೇ ತಿಂಗಳ 4, 13, 22 ಮತ್ತು 31 ರಂದು ಜನಿಸಿದರೆ ಅವರ ರಾಡಿಕ್ಸ್ ಸಂಖ್ಯೆ 4 ಆಗಿರುತ್ತದೆ

ರಾಡಿಕ್ಸ್ 4 ಹೊಂದಿರುವವರಿಗೆ ರಾಹು ಜೊತೆ ಸಂಬಂಧ ಇರುತ್ತೆ. ರಾಹು ವ್ಯವಸ್ಥೆ, ಶಿಸ್ತು ಹಾಗೂ ಸ್ಥಿರತೆಯ ಸಂಕೇತವಾಗಿದೆ

ರಾಡಿಕ್ಸ್ ಸಂಖ್ಯೆ 4 ಕಠಿಣ ಪರಿಶ್ರಮದ ಸಂಕೇತವಾಗಿದೆ. ಈ ಸಂಖ್ಯೆಯವರು ಜೀವನದಲ್ಲಿ ಗಟ್ಟಿಯಾದ ಅಡಿಪಾಯ ಹಾಕಿಕೊಳ್ಳುತ್ತಾರೆ

2025 ರಲ್ಲಿ ರಾಡಿಕ್ಸ್ ಸಂಖ್ಯೆ 4 ಹೊಂದಿರುವವರು ಹೊಸ ಬದಲಾವಣೆಗಳೊಂದಿಗೆ ಸಾಕಷ್ಟು ಏರಿಳಿತಗಳನ್ನು ಕಾಣಲಿದ್ದಾರೆ

ಇವರು 2025 ರ ಹೊಸ ವರ್ಷದಲ್ಲಿ ಹಲವು ವಿಷಯಗಳನ್ನು ಹೊಸದಾಗಿ ಅಳವಡಿಸಿಕೊಳ್ಳಲು ಆಸಕ್ತಿ ತೋರಿಸುತ್ತಾರೆ

ಈ ಸಂಖ್ಯೆಯವರು ಜೀವನದಲ್ಲಿ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ. ಹೆಚ್ಚು ಗಂಭೀರವಾಗಿರುವುದನ್ನ ತಪ್ಪಿಸುತ್ತಾರೆ

ರಾಡಿಕ್ಸ್ ಸಂಖ್ಯೆ 4ರ ಜನರು 2025ರಲ್ಲಿನ ಗಣೇಶ ಚತುರ್ಥಿಯಂದು ಉಪವಾಸ ಮತ್ತು ಪೂಜೆ ಮಾಡುವುದರಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ

ಗಣೇಶನನ್ನು ಪೂಜಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ, ಆರ್ಥಿಕವಾಗಿ ಬಲಗೊಳ್ಳುತ್ತೀರಿ

ಭಾನುವಾರ, ಸೋಮವಾರ ಮತ್ತು ಶನಿವಾರ ಈ ರಾಡಿಕ್ಸ್ ನವರಿಗೆ ಮಂಗಳಕರವಾಗಿರುತ್ತದೆ

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ

ಶ್ರೀಲಂಕಾ ವಿರುದ್ಧ ಭಾರತದ 317 ರನ್‌ ಗೆಲುವಿಗೆ 2 ವರ್ಷ

AFP