Saif Ali Khan: ನಟ ಸೈಫ್‌ ಆಲಿ ಖಾನ್‌ ಬಗ್ಗೆ ನಿಮಗೆಷ್ಟು ಗೊತ್ತು?

ವ್ಯಕ್ತಿಚಿತ್ರ

By Praveen Chandra B
Jan 16, 2025

Hindustan Times
Kannada

ಸೈಫ್ ಅಲಿ ಖಾನ್ ಹಿಂದಿ ನಟ, ನಿರ್ಮಾಪಕ. ದರೋಡೆಕೋರನೊಬ್ಬ ಚಾಕುವಿನಿಂದ ಇರಿದ ಘಟನೆಯಿಂದ ಇದೀಗ ಇವರು ಸುದ್ದಿಯಲ್ಲಿದ್ದಾರೆ.

ಮುಂಬೈನ ಪಶ್ಚಿಮ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಮಧ್ಯರಾತ್ರಿ 2.30ರ ಸುಮಾರಿಗೆ ಘಟನೆ ನಡೆದಿದೆ. ಈಗ ಇವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಅಪರಾಧಿಗಳನ್ನು ಬಂಧಿಸುವ ಪ್ರಕ್ರಿಯೆಯಲ್ಲಿ ಪೊಲೀಸರು ಇದ್ದಾರೆ. 

ಪಟೌಡಿ ಕುಟುಂಬದ ಮುಖ್ಯಸ್ಥರಾಗಿರುವ ಇವರು ನಟಿ ಶರ್ಮಿಳಾ ಟ್ಯಾಗೋರ್ ಮತ್ತು ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಪುತ್ರ.

ಸೈಫ್‌ ಅವರ ಮೊದಲ ಪತ್ನಿ ಹೆಸರು ಅಮೃತಾ ಸಿಂಗ್‌. ಅವರಿಗೆ ಸಾರಾ ಮತ್ತು ಇಬ್ರಾಹಿಂ ಇಬ್ಬರು ಮಕ್ಕಳು. ಕರೀನಾ ಕಪೂರ್‌ ಎರಡನೇ ಪತ್ನಿ. ತೈಮೂರ್‌ ಮತ್ತು ಜೆಹ್‌ ಇವರ ಮಕ್ಕಳು. ಒಟ್ಟು ನಾಲ್ವರು ಮಕ್ಕಳ ತಂದೆ.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.  2010ರಲ್ಲಿ ನಾಲ್ಕನೇ ಅತ್ಯುನ್ನತ ಭಾರತೀಯ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಪಡೆದರು.

ಖಾನ್ ಪರಂಪರಾ (1993) ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಯೇ ದಿಲ್ಲಗಿ (1994), ಮೈನ್ ಖಿಲಾಡಿ ತೂ ಅನಾರಿ (1994), ಕಚ್ಚೆ ಧಾಗೆ (1999) ಮತ್ತು ಹಮ್ ಸಾಥ್-ಸಾಥ್ ಹೇ (1999) ಚಿತ್ರಗಳಲ್ಲಿ ನಟಿಸಿದಾರೆ.

ರೋಮಾನ್ಸ್‌ ಕಾಮಿಡಿ ಸಿನಿಮಾಗಳಾದ ದಿಲ್ ಚಾಹ್ತಾ ಹೈ (2001) ಮತ್ತು ಕಲ್ ಹೋ ನಾ ಹೋ (2003) ನಟನೆಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.

ಹಮ್ ತುಮ್ (2004) ಪರಿಣೀತಾ, ಸಲಾಮ್ ನಮಸ್ತೆ (ಎರಡೂ 2005) ಮತ್ತು ತಾ ರಾ ರಮ್ ಪಮ್ (2007) ಇವರು ನಟಿಸಿದ ಇನ್ನಿತರ ಚಿತ್ರಗಳು.

ಏಕ್ ಹಸಿನಾ ಥಿ (2004), ಬೀಯಿಂಗ್ ಸೈರಸ್ (2006),  ಓಂಕಾರ (2006), ರೇಸ್ (2008) ಮತ್ತು ರೇಸ್ 2 (2013), ಲವ್ ಆಜ್ ಕಲ್ (2009), ಕಾಕ್‌ಟೈಲ್ (2012) ಸಿನಿಮಾಗಳು ಬಾಕ್ಸ್‌ಆಫೀಸ್‌ನಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡವು.  ಸೇಕ್ರೆಡ್ ಗೇಮ್ಸ್ (2018–2019)ನಂತಹ ವೆಬ್‌ ಸರಣಿಗಳಲ್ಲಿಯೂ ನಟಿಸಿದ್ದಾರೆ.  ತನ್ಹಾಜಿ (2020) ಮತ್ತು ದೇವರ: ಭಾಗ 1 (2024)ರಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಎರಡನೇ ಮಗುವಿನ ತಂದೆಯಾದ ಪ್ಯಾಟ್ ಕಮಿನ್ಸ್

File