ಒಲಿಂಪಿಕ್ ಪದಕ ಗೆದ್ದ ಸ್ವಪ್ನಿಲ್‌ಗೆ ಕೊನೆಗೂ ಸಿಕ್ತು ಪ್ರಮೋಷನ್
By Jayaraj Aug 02, 2024
Hindustan Times Kannada
ಭಾರತದ ಸ್ವಪ್ನಿಲ್ ಕುಸಾಲೆ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದರು.
ಕುಸಾಲೆ, 2015ರಿಂದ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ವರದಿ ಪ್ರಕಾರ, ಸ್ವಪ್ನಿಲ್ ಕುಸಾಲೆ 2015ರಿಂದಲೂ ಪ್ರಯಾಣ ಟಿಕೆಟ್ ಪರೀಕ್ಷಕರಾಗಿ (TTE) ಕೆಲಸ ಮಾಡುತ್ತಿದ್ದಾರೆ.
ಹಲವು ಬಾರಿ ಬಡ್ತಿಗಾಗಿ ಮನವಿ ಸಲ್ಲಿಸಿದ್ದರೂ, ಅದನ್ನು ರೈಲ್ವೆ ಅಧಿಕಾರಿಗಳು ನಿರಾಕರಿಸಿದ್ದರು.
ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕುಸಾಲೆ ಪದಕ ಗೆದ್ದ ಬೆನ್ನಲ್ಲೇ, ಅವರ ಬಡ್ತಿ ತ್ವರಿತಗತಿಯಲ್ಲಿ ಸಾಗಿದೆ.
ಕುಸಾಲೆ ಅವರನ್ನು ಟಿಟಿಇ ಕೆಲಸದಿಂದ ಮುಂಬೈನ ಕ್ರೀಡಾ ಕೋಶದ ಒಎಸ್‌ಡಿಯಾಗಿ ಬಡ್ತಿ ನೀಡಲಾಗಿದೆ ಎಂದು ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸ್ವಪ್ನಿಲ್ ನೀಲಾ ತಿಳಿಸಿದ್ದಾರೆ.
ಕುಸಾಲೆ ಅವರಿಗೆ ಬಡ್ತಿ ಆದೇಶ ನೀಡಲಾಗಿದೆ ಎಂದು ನೀಲಾ ಸುದ್ದಿ ಸಂಸ್ಥೆ ಪಿಟಿಐಗೆ ಖಚಿತಪಡಿಸಿದ್ದಾರೆ.
ಕುಸಾಲೆ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 50 ಮೀ ರೈಫಲ್ 3 ಸ್ಥಾನಗಳ ಸ್ಪರ್ಧೆಯಲ್ಲಿ ಭಾರತಕ್ಕೆ ಇದು ಮೊದಲ ಒಲಿಂಪಿಕ್ ಪದಕ.