ಬೇಸಿಗೆಗೆ ಹನಿಮೂನ್ ಹೋಗಲು ಅತ್ಯುತ್ತಮ ಪ್ರವಾಸಿ ತಾಣಗಳಿವು

By Raghavendra M Y
Apr 04, 2024

Hindustan Times
Kannada

ಸಾಮಾನ್ಯವಾಗಿ ಜನ ಬೇಸಿಗೆಯಲ್ಲಿ ಹನಿಮೂನ್ ಅನ್ನು ಮುಂದೂಡುತ್ತಾರೆ. ಬಿಸಿಯಲ್ಲಿ ಪ್ರಯಾಣ ಅಷ್ಟೊಂದು ಆಹ್ಲಾದಕರವಾಗಿರೋದಿಲ್ಲ

ನಿಮ್ಮ ಮದುವೆ ಬೇಸಿಗೆಯಲ್ಲಿ ಆಗಿದ್ದರೆ, ಇದೇ ವೇಳೆ ನೀವು ಹನಿಮೂನ್‌ಗೆ ಹೋಗುವ ಪ್ಲಾನ್ ಮಾಡಿದ್ರೆ ಈ ತಾಣಗಳಿಗೆ ಭೇಟಿ ನೀಡಿ

ಬೇಸಿಗೆಯಲ್ಲೂ ನೋಡಬಹುದಾದ ತುಂಬಾ ಕೂಲ್ ಆಗಿರುವ ಹಲವು ಸ್ಥಳಗಳು ಭಾರತದಲ್ಲಿವೆ. ಇಲ್ಲಿ ಬಿಸಿ ಅನ್ನೋದೇ ಇರುವುದಿಲ್ಲ

ಮಧುಚಂದ್ರಕ್ಕೆ ಹೋಗಲು ಬೇಸಿಗೆಯಲ್ಲೂ ಬೆಸ್ಟ್ ಎನಿಸುವ ತಾಣಗಳ ಮಾಹಿತಿ ಇಲ್ಲಿದೆ

ಡಾರ್ಜಿಲಿಂಗ್ - ಬೇಸಿಗೆಯಲ್ಲಿ ಹನಿಮೂನ್‌ಗೆ ಹೋಗಲು ಡಾರ್ಜಿಲಿಂಗ್ ಬೆಸ್ಟ್ ತಾಣ. ಭಾರತದ ಈಶಾನ್ಯದಲ್ಲಿರುವ ಡಾರ್ಜಿಲಿಂಗ್‌ನಲ್ಲಿ ಸುಂದರ ಕಣಿವೆಗಳಿವೆ

ಡಾರ್ಜಿಲಿಂಗ್‌ನಲ್ಲಿ ಬೆಟ್ಟಗಳನ್ನ ಆವರಿಸಿದ ಮೋಡಗಳು, ಆಟಿಕೆ ರೈಲು ಗಾಂಡೋಲಾ ಸವಾರಿ, ಹಚ್ಚ ಹಸಿರಿನ ಟೀ ತೋಟಗಳನ್ನ ಆನಂದಿಸಬಹುದು

ಊಟಿ - ಬೇಸಿಗೆಯಲ್ಲೂ ಹೆಚ್ಚು ತಂಪಾದ ತಾಣವೆಂದರೆ ಅದು ದಕ್ಷಿಣ ಭಾರತದ ಊಟಿ. ತಮಿಳುನಾಡಿನ ಗಿರಿಧಾಮ ಅಂತಲೂ ಕರೆಯಲಾಗುತ್ತೆ

 ಊಟಿಯ ಮೋತಿ ಲೇಕ್, ಎಮರಾಲ್ಡ್ ಲೇಕ್, ರೋಸ್ ಗಾರ್ಡನ್, ಬೊಟಾನಿಕಲ್ ಗಾರ್ಡನ್, ಸೇಂಟ್ ಸ್ಟೀಫನ್ಸ್ ಚರ್ಚೆ ನೋಡಬೇಕಾದ ಸ್ಥಳಗಳು

ಔಲಿ - ಬೇಸಿಗೆಯಲ್ಲಿ ಹನಿಮೂನ್‌ಗೆ ಹೋಗಲು ಔಲಿ ಕೂಡ ಅತ್ಯುತ್ತಮ ತಾಣ. ಉತ್ತರಾಖಂಡ್‌ನ ಗರ್ವಾಲ್‌ ಪ್ರದೇಶದ ಚಮೋಲಿ ಜಿಲ್ಲೆಯಲ್ಲಿದೆ

ತುಂಬಾ ಕೂಲ್ ಆಗಿರುವ ಔಲಿಗೆ ಬೇಸಿಗೆಯಲ್ಲಿ ನವ ಜೋಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ