ಮಕ್ಕಳಿಂದ ಮೊಬೈಲ್ ಚಟ ಬಿಡಿಸುವುದು ಹೇಗೆ?
By Reshma
Nov 28, 2024
Hindustan Times
Kannada
ಇತ್ತೀಚಿನ ದಿನಗಳಲ್ಲಿ ಮಕ್ಕಳು ಬಾಲ್ಯದಿಂದಲೇ ಮೊಬೈಲ್ ಬಳಸಲು ಶುರು ಮಾಡುತ್ತಾರೆ
ಊಟ ಮಾಡುವಾಗ ಕಾರ್ಟೂನ್ ಬೇಕೇಬೇಕು. ಆದರೆ ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಆರೋಗ್ಯಕ್ಕೆ ಹಾನಿಕರ
ಮಕ್ಕಳ ಮೊಬೈಲ್ ಚಟ ಬಿಡಿಸುವುದು ಹೇಗೆ ಎಂಬ ಪೋಷಕರ ಪ್ರಶ್ನೆಗೆ ಇಲ್ಲಿದೆ ಉತ್ತರ
ಮೊಬೈಲ್ ನೋಡಲು ನಿರ್ದಿಷ್ಟ ಸಮಯ ಸೂಚಿಸಿ. ಮೊಬೈಲ್ ದುಷ್ಪರಿಣಾಮ ಅರ್ಥವಾಗುವಂತೆ ವಿವರಿಸಿ
ಮಗುವಿನ ಜೊತೆ ನೀವು ಆಟವಾಡಿ, ಆಗ ಮಗು ಮೊಬೈಲ್ ಕೇಳುವುದಿಲ್ಲ. ಒಂಟಿತನ ಕಾಡಿದಾಗ ಮಗು ಮೊಬೈಲ್ ನೋಡಬಹುದು
ನೀವು ಮೊಬೈಲ್ ಬಳಸುವುದು ನೋಡಿದ್ರೆ ಮಗು ಹಟ ಮಾಡುತ್ತದೆ. ಮಗುವಿನ ಎದುರು ನೀವು ಮೊಬೈಲ್ ಬಳಸದಿರಿ
ಮಗು ಶಾಲೆ ಮುಗಿಸಿ ಬಂದ ಮೇಲೆ ಓದು, ಆಟ, ವ್ಯಾಯಾಮ ಅಂತೆಲ್ಲಾ ಬ್ಯುಸಿಯಾಗಿರಿಸಿ, ಇದರಿಂದ ಮೊಬೈಲ್ ನೋಡುವುದಿಲ್ಲ
ಮಕ್ಕಳನ್ನು ಹೊರಗಡೆ ಆಟವಾಡಲು ಕಳುಹಿಸಿ. ಹೀಗೆ ಮಾಡುವುದು ಕೂಡ ಮೊಬೈಲ್‌ನಿಂದ ದೂರ ಮಾಡುವ ಉಪಾಯವಾಗಿದೆ
ನೀವು ಹೇಳಿದಂತೆ ಮಗು ಮೊಬೈಲ್ ನೋಡುವುದನ್ನು ಕಡಿಮೆ ಮಾಡಿದರೆ ಮಗುವನ್ನು ಹೊಗಳಿ. ಇದು ಕೂಡ ಪರಿಣಾಮ ಬೀರುತ್ತದೆ
ಮೊಬೈಲ್ ಚಟ ಬಿಡಿಸಬೇಕು ಎಂದುಕೊಂಡು ತುಂಬಾ ಕಟ್ಟುನಿಟ್ಟಾಗಿ ವರ್ತಿಸಬೇಡಿ. ಇದರಿಂದ ಮಗುವಿನ ಹಟ ಜೋರಾಗಬಹುದು
Amruthadhaare: ಗೌತಮ್ ದಿವಾನ್ ಬಿಕ್ಕಿಬಿಕ್ಕಿ ಅಳುತ್ತಿರುವುದೇಕೆ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ