ಮಕ್ಕಳು ಬೇಗ ನಿದ್ದೆ ಮಾಡ್ಬೇಕು ಅಂದ್ರೆ ಈ ಸಲಹೆ ಪಾಲಿಸಿ

By Reshma
Dec 09, 2024

Hindustan Times
Kannada

ಮಗು ಅಥವಾ ಮಕ್ಕಳು ಬೇಗ ಮಲಗದ ಕಾರಣ ತಡರಾತ್ರಿವರೆಗೂ ಜಾಗರಣೆ ಮಾಡುವ ಪೋಷಕರಿದ್ದಾರೆ

ಬೇಗ ಮಲಗದ ಕಾರಣ ಕೆಲವು ಪೋಷಕರು ಮಕ್ಕಳಿಗೆ ಹೊಡೆಯುವುದು, ಗದರುವುದು ಮಾಡುತ್ತಾರೆ. ಇದು ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ 

ನಿಮ್ಮ ಮಗು ಕೂಡ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡುತ್ತಿಲ್ಲ ಎಂದರೆ ಈ ಸಲಹೆ ಪಾಲಿಸಿ 

ಮಗುವಿಗೆ ಮಗಲುವ ದಿನಚರಿ ಅಭ್ಯಾಸ ಮಾಡಿಸಿ. ಪ್ರತಿದಿನ ಮಗು ಮಲಗಲು ಬಯಸುವ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿಸಿ 

ಮಗು ಮಲಗಲು ಉತ್ತಮ ವಾತಾವರಣ ಕಲ್ಪಿಸಿ. ದೀಪಗಳನನ್ನು ಆರಿಸಿ, ಸದ್ದಾಗದಂತೆ ನೋಡಿಕೊಳ್ಳಿ. ಕೋಣೆಯ ಉಷ್ಣಾಂಶವನ್ನು ಹೊಂದಿಸಿ 

ಮಗುವಿಗೆ ಮಲಗುವ ಮುನ್ನ ಕಥೆ ಹೇಳುವ ಅಭ್ಯಾಸ ಮಾಡಿಸಿ. ಒಳ್ಳೆಯ ಕಥೆಗಳ ಜತೆ ಲಾಲಿಹಾಡಿ 

ತಪ್ಪಿಯೂ ಮಗುವಿಗೆ ಮಲಗುವ ಮುನ್ನ ಮೊಬೈಲ್ ಕೊಡದಿರಿ. ಇದರಿಂದ ನಿದ್ರಾಹೀನತೆ ಕಾಡಬಹುದು 

ಶಾಲೆಗೆ ಹೋಗುವ ಮಗುವಾಗಿದ್ದರೆ ಮಲಗುವ ಮುನ್ನ ಮಗುವಿನ ಶಾಲಾ ದಿನಚರಿಗಳ ಬಗ್ಗೆ ಕೇಳಿ. ಅದನ್ನು ಹೇಳುತ್ತಾ ಮಗು ಅಲ್ಲೇ ಮಲಗಿರುತ್ತದೆ

ಮಗುವಿನ ನಿದ್ದೆಗೆ ಸಹಕರಿಸುವ ಆಹಾರವನ್ನು ನೀಡಿ. ಮಕ್ಕಳಿಗೆ ಹೊಟ್ಟೆ ತುಂಬಾ ತಿನ್ನಿಸಿದರೆ ಮಾತ್ರ ನಿದ್ದೆ ಬರುತ್ತದೆ ನೆನಪಿರಲಿ 

ತಂದೆ ತಾಯಿ ಇಬ್ಬರೂ ಮಗುವನ್ನು ಮಲಗಿಸುವ ಪ್ರಯತ್ನ ಮಾಡಬೇಕು. ಪೋಷಕರು ಮೊಬೈಲ್ ಹಿಡಿದು ಕೂತರೇ ಮಗು ಬೇಗ ಮಲಗುವುದಿಲ್ಲ  

ಡೊನಾಲ್ಡ್ ಟ್ರಂಪ್ ಪ್ರಮಾಣವಚನ; ಈ ಬಾರಿ ಏನು ವಿಶೇಷ?