ಪುಟ್ಟ ಮಕ್ಕಳೊಂದಿಗೆ ಟ್ರಿಪ್ ಆಯೋಜಿಸುವುದು ಹೇಗೆ?
By Rakshitha Sowmya
Jan 07, 2025
Hindustan Times
Kannada
ಚಿಕ್ಕ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವುದು ಸುಲಭದ ಮಾತಲ್ಲ, ಮೊದಲೇ ಬಹಳ ಪ್ಲ್ಯಾನ್ ಮಾಡಿರಬೇಕು
ನೀವೂ ಕೂಡಾ ಮಕ್ಕಳೊಂದಿಗೆ ಪ್ರವಾಸಕ್ಕೆ ಹೋಗುವುದಿದ್ದರೆ ಇಲ್ಲಿ ಕೆಲವೊಂದು ಟಿಪ್ಸ್ ಇವೆ, ನಿಮಗೆ ಅನುಕೂಲವಾಗಬಹುದು
ನೀವು ಹೋಗುವ ಸ್ಥಳಗಳಲ್ಲಿ ಮಕ್ಕಳಿಗೂ ಟಿಕೆಟ್ ಇದ್ದರೆ ಅದನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಿ, ಇದರಿಂದ ನೀವು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ
ನೀವು ಹೋಗುವ ಸ್ಥಳದ ವಾತಾವರಣ, ನಿಮ್ಮ ಮಕ್ಕಳು ಅದಕ್ಕೆ ಹೊಂದಿಕೊಳ್ಳುತ್ತಾರೆಯೇ, ಮಗುವಿನ ಆರೋಗ್ಯ ಹೇಗಿದೆ ಎಂಬುದು ನಿಮ್ಮ ಗಮನದಲ್ಲಿರಲಿ
ಮಗುವಿಗೆ ಬೇಕಾದ ಸೋಪು, ಪೌಡರ್, ಕ್ರೀಮ್, ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳನ್ನು ಮೊದಲೇ ಪ್ಯಾಕ್ ಮಾಡುವುದನ್ನು ಮರೆಯದಿರಿ
1-2 ದಿನಗಳ ಟ್ರಿಪ್ ಆದರೂ ಸರಿಯೇ ಮಕ್ಕಳಿಗಾಗಿ 6 ಜೊತೆ ಬಟ್ಟೆಗಳನ್ನಾದರೂ ಕೊಂಡೊಯ್ಯಿರಿ
ಮಕ್ಕಳಿಗೆ ಅಗತ್ಯವಾದ ಮೆಡಿಸನ್‌ಗಳು, ಹೆಚ್ಚುವರಿ ಡೈಪರ್ ಕೂಡಾ ತಪ್ಪದೆ ಪ್ಯಾಕ್ ಮಾಡಿಕೊಳ್ಳಿ, ಅದು ಬಹಳ ಅವಶ್ಯಕ
ಮಕ್ಕಳಿಗೆ ಇಷ್ಟವಾದ ಆಟಿಕೆಗಳನ್ನು ಕೂಡಾ ತಪ್ಪದೆ ಕೊಂಡೊಯ್ಯಿರಿ
ಮಕ್ಕಳ ಆಹಾರ, ಅವರು ಇಷ್ಟಪಟ್ಟು ತಿನ್ನುವ ಸ್ನಾಕ್ಸ್ ಅವರ ಲಗ್ಗೇಜ್ ಬ್ಯಾಗ್‌ನಲ್ಲಿರಲಿ
ಮೊದಲೇ ನೀವು ಎಲ್ಲಾ ಮುನ್ನೆಚರಿಕೆಯಿಂದ ಇದ್ದರೆ, ಪ್ಲ್ಯಾನ್ ಮಾಡಿದ್ದರೆ ಖಂಡಿತ ಈ ಟ್ರಿಪ್ ಎಂಜಾಯ್ ಮಾಡಬಹುದು
ವಿವಾಹಗಳಿಗೆ ಟ್ರೆಂಡ್ ಆಗುತ್ತಿರುವ ಬ್ಲೌಸ್ ಡಿಸೈನ್ ಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ