ಅನ್ಕಂಡಿಷನಲ್ ಲವ್ ಎನ್ನುವ ಪದ ಕೇಳಿದ್ದೀರಿ ಅಲ್ವಾ. ನೀವು ನಿಮ್ಮ ಮಕ್ಕಳ ಮೇಲೆ ತೋರುವ ಪ್ರೀತಿ ಎಲ್ಲದಕ್ಕೂ ಮಿಗಿಲಾಗಿ ಇರಬೇಕು. ಗೆದ್ದಾಗ ಮಾತ್ರ ಬೆನ್ನುತಟ್ಟದೇ ಅವರು ಸೋತಾಗಲೂ ಅವರ ಕೈಹಿಡಿದು ನಡೆಯಬೇಕು.
ಮಕ್ಕಳು ಕಿರುಚಾಡುತ್ತಾರೆಂದು ನೀವು ಅವರ ಮೇಲೆ ಗದರಿದರೆ ಅವರು ಮತ್ತಷ್ಟು ಆಕ್ರೋಶಗೊಳ್ಳುತ್ತಾರೆ. ಶಾಂತವಾಗಿ, ತಾಳ್ಮೆಯಿಂದ ಅವರನ್ನ ನಿಭಾಯಿಸಬೇಕು.
ಮಕ್ಕಳ ಮಾತನ್ನ, ಅವರ ಆಲೋಚನೆಗಳನ್ನ ನೀವು ಸಮಾಧಾನದಿಂದ ಕೇಳಬೇಕು. ಮೃದುವಾಗಿ ಮಾತನಾಡುವುದನ್ನು ಕಲಿಸಿಕೊಡಬೇಕು. ಇದರಿಂದ ಹೊರಜಗತ್ತಿನಲ್ಲಿ ಅವರ ಸಂವಹನ ಉತ್ತಮವಾಗಿರುತ್ತದೆ.
ಮಕ್ಕಳಿಗೆ ಕರುಣೆಯ ಜೊತೆಗೆ ಸಹಾನುಭೂತಿಯನ್ನು ಕಲಿಸಿಕೊಡಬೇಕು. ಮತ್ತೊಬ್ಬರ ಕಷ್ಟ, ಭಾವನೆಗಳನ್ನು ಅರ್ಥ ಮಾಡಿಕೊಂಡು ಸಹಾಯ ಮಾಡುವುದನ್ನು ನೀವು ಕಲಿಸಿಕೊಡಬೇಕು.
ಮಕ್ಕಳಿಗೆ ಬಲವಂತ ಮಾಡದೇ ಅವರ ಆಸಕ್ತಿಯೆಡೆ ಅವರು ಸಾಗಲು ದಾರಿ ಮಾಡಿಕೊಡಬೇಕು.
ಚಾಣಕ್ಯ ನೀತಿ: ಇಂಥ ಪುರುಷರನ್ನು ಮಹಿಳೆಯರು ಬೇಗ ಇಷ್ಟಪಡ್ತಾರೆ