ನೀರಜ್ ಚೋಪ್ರಾ ಕಣಕ್ಕಿಳಿಯುವುದು ಯಾವಾಗ, ಎಷ್ಟೊತ್ತಿಗೆ?

By Prasanna Kumar P N
Aug 04, 2024

Hindustan Times
Kannada

ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ನೀರಸ ಪ್ರದರ್ಶನ ನೀಡುತ್ತಿದ್ದಾರೆ. 

ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಕ್ರೀಡಾಕೂಟಕ್ಕೆ ಸಹಜವಾಗಿ ದೊಡ್ಡ ಮೊತ್ತದಲ್ಲಿ ಖರ್ಚಾಗುತ್ತದೆ. ಹಾಗಿದ್ದರೆ ಈ ಬಾರಿಯ ಕ್ರೀಡಾಕೂಟಕ್ಕೆ ಆಗುವ ಖರ್ಚು ಎಷ್ಟು ನೋಡೋಣ.

ಈಗಾಗಲೇ ಪಿವಿ ಸಿಂಧು, ಸಾತ್ವಿಕ್, ಚಿರಾಗ್, ದೀಪಿಕಾ ಸೇರಿದಂತೆ ಪದಕದ ಭರವಸೆ ಮೂಡಿಸಿದ್ದ ಸ್ಟಾರ್​ಗಳೇ ಹೊರಬಿದ್ದಿದ್ದಾರೆ.

ಆದರೆ ಈಗ ಪದಕದ ಭರವಸೆ‌ ಇರುವುದು ಒಬ್ಬರ ಮೇಲಷ್ಟೆ. ಅದು ನೀರಜ್ ಚೋಪ್ರಾ ಮೇಲೆ. ಆದರೆ ಚೋಪ್ರಾ ಕಣಕ್ಕಿಳಿಯುವುದು ಯಾವಾಗ?

ನೀರಜ್ ಆಗಸ್ಟ್ 6 ರಂದು ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾರೆ. ಗುಂಪು ಎ ಅರ್ಹತಾ ಸುತ್ತು ಮಧ್ಯಾಹ್ನ 1:50ಕ್ಕೆ ಪ್ರಾರಂಭವಾಗುತ್ತದೆ.

ನೀರಜ್ ಅರ್ಹತಾ ಸುತ್ತಿನಿಂದ ಮುನ್ನಡೆದರೆ, ಆಗಸ್ಟ್ 8 ರಂದು ರಾತ್ರಿ 11:55ಕ್ಕೆ (ಭಾರತೀಯ ಕಾಲಮಾನ)  ಶುರುವಾಗುವ ಫೈನಲ್‌ನಲ್ಲಿ ಸ್ಪರ್ಧಿಸುತ್ತಾರೆ.

ಟೊಕಿಯೊ ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

ಹೆಣ್ಣಿಗೆ ಸೀರೆ ಯಾಕೆ ಅಂದ; ಶ್ರೇಯಾಂಕಾ ಅಂದ-ಚಂದ