ನಾಯಿಗಳು ಹುಲ್ಲು ಯಾಕೆ ತಿನ್ನುತ್ತವೆ? ಅಚ್ಚರಿಯ 5 ಕಾರಣಗಳು

Photo Credit: Pexels

By Praveen Chandra B
Feb 01, 2025

Hindustan Times
Kannada

ನೀವು ಸಾಕಿದ ನಾಯಿ ಆಗಾಗ ಹುಲ್ಲು ತಿನ್ನುವುದನ್ನು ನೀವು ಗಮನಿಸಿರಬಹುದು. ಶ್ವಾನಗಳು ಯಾಕೆ ಹುಲ್ಲು ತಿನ್ನುತ್ತವೆ? ಈ ಅಭ್ಯಾಸಕ್ಕೆ ಹಲವು ಸಂಭಾವ್ಯ ಕಾರಣಗಳು ಇವೆ.

Photo Credit: Pexels

ಕೆಲವು ನಾಯಿಗಳು ಹುಲ್ಲಿನ ರುಚಿಯನ್ನು ಆನಂದಿಸುತ್ತವೆ. ಹೀಗಾಗಿ ಹುಲ್ಲು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತವೆ. 

Photo Credit: Pexels

ನಾಯಿಗಳಿಗೆ ಅಗತ್ಯವಿರುವ ಫೈಬರ್, ಜೀವಸತ್ವಗಳು ಅಥವಾ ಖನಿಜಗಳಂತಹ ಕೆಲವು ಹೆಚ್ಚುವರಿ ಪೋಷಕಾಂಶಗಳನ್ನು ಹುಲ್ಲು ಒದಗಿಸಬಹುದು.

Photo Credit: Pexels

ಹುಲ್ಲು ತಿನ್ನುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆನೋವನ್ನು ನಿವಾರಿಸುತ್ತದೆ ಎಂದು ನಂಬಲಾಗಿದೆ.

Photo Credit: Pexels

ಕೆಲವೊಮ್ಮೆ ನಾಯಿಗಳು ಹುಲ್ಲು ತಿಂದ ಬಳಿಕ ವಾಂತಿ ಮಾಡುತ್ತವೆ. ಆದರೆ, ಹೆಚ್ಚಿನ ನಾಯಿಗಳು ಅನಾರೋಗ್ಯಕ್ಕೆ ತುತ್ತಾಗುವುದಿಲ್ಲ.

Photo Credit: Pexels

ನಾಯಿಗಳಿಗೆ ಒಮ್ಮೊಮ್ಮೆ ಬೇಸರವಾಗುತ್ತದೆ. ಮಾಡಲು ಏನೂ ಕೆಲಸ ಇರುವುದಿಲ್ಲ. ಈ ರೀತಿ ಬೋರ್‌ ಆದಾಗಲೂ ನಾಯಿಗಳು ಹುಲ್ಲು ತಿನ್ನುತ್ತವೆ.

Photo Credit: Pexels

ಆತಂಕ ಅಥವಾ ಒತ್ತಡವನ್ನು ಹೊಂದಿರುವ ನಾಯಿಗಳು ತಮ್ಮ ಭಾವನೆಗಳನ್ನು ನಿಭಾಯಿಸುವ ಸಲುವಾಗಿ ಹುಲ್ಲನ್ನು ತಿನ್ನಬಹುದು.

Photo Credit: Pexels

ನಾಯಿಗಳು ಹುಲ್ಲು ತಿಂದರೆ ತೊಂದರೆಯಿಲ್ಲ. ಆದರೆ,  ಕೀಟನಾಶಕಗಳನ್ನು ಹಾಕಿರುವ ಹುಲ್ಲುಗಳು ಅಥವಾ ಹಾನಿಕಾರಕ ಸಸ್ಯಗಳನ್ನು ತಿನ್ನದಂತೆ ನೋಡಿಕೊಳ್ಳಿ.

Photo Credit: Pexels

ಟ್ರೆಂಡ್‌ನಲ್ಲಿರುವ ವಜ್ರದ ಮಂಗಳಸೂತ್ರ ಡಿಸೈನ್‌ಗಳಿವು

Pinterest