2ನೇ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅಮೂಲ್ಯ ತಾವು ಓದಿದ್ದು ಹೇಗೆ ಎನ್ನುವುದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

By Suma Gaonkar
Apr 08, 2025

Hindustan Times
Kannada

ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನಲ್ಲಿ ಅಮೂಲ್ಯ ಓದಿದ್ದರು

2ನೇ ಪಿಯುಸಿ ವಿಜ್ಞಾನದಲ್ಲಿ ಅಮೂಲ್ಯ 600 ಕ್ಕೆ 599 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲಿಗರಾಗಿದ್ದಾರೆ

ಸಿಲಬಸ್‌ನ ಎಲ್ಲ ಚಾಪ್ಟರ್ ಪೂರ್ತಿ ಓದಿಕೊಂಡಿದ್ದೆ. ಕನಿಷ್ಠ 5 ಸಲ ರಿವಿಷನ್ ಮಾಡಿದ್ದೆ. ಇದು ಹೆಚ್ಚು ಅಂಕಪಡೆಯಲು ಸಹಾಯ ಮಾಡಿತು ಎನ್ನುತ್ತಾರೆ ಅಮೂಲ್ಯ

 ಸ್ಪೋರ್ಟೀವ್ ಆಗಿ ತಗೊಂಡೆ ನಾನು ಪ್ರತಿ ಪರೀಕ್ಷೆಯನ್ನೂ ಸ್ಪೋರ್ಟೀವ್ ಆಗಿ ತಗೊಂಡು ಸಲಹೆ ಕೇಳುತ್ತಿದ್ದೆ. ಒತ್ತಡ ತೆಗೆದುಕೊಳ್ಳದೆ ಖುಷಿಯಿಂದ ಅಭ್ಯಾಸ ಮಾಡುತ್ತಿದ್ದೆ. ಹೀಗಾಗಿ ನನಗೆ ಪರೀಕ್ಷೆ ಎಂದರೆ ಭಯ ಇರಲಿಲ್ಲ ಎನ್ನುತ್ತಾರೆ ಅಮೂಲ್ಯ

ಕಾಲೇಜಿನಲ್ಲಿ ಹಲವು ಬಾರಿ ಯೂನಿಟ್‌ ಟೆಸ್ಟ್ ಮಾಡಿದ್ದರು. ಇದೂ ಸಹ ನನಗೆ ಸಿದ್ಧತೆಗೆ ನೆರವಾಯಿತು ಎನ್ನುತ್ತಾರೆ ಅಮೂಲ್ಯ

ಕಾಲೇಜು ಮಟ್ಟದಲ್ಲಿ ನಾನು ಹಲವು ಬಾರಿ ಪ್ರಿಪರೇಟರಿ ಎಕ್ಸಾಂ ಬರೆದೆ. ಅದು ಪೂರ್ವ ಸಿದ್ಧತಾ ಪರೀಕ್ಷೆಯಾಗಿದ್ದರೂ ಅದೇ ಅಂತಿಮ ಪರೀಕ್ಷೆ ಎನ್ನುವಷ್ಟು ಶ್ರದ್ಧೆಯಿಂದ ಬರೆಯುತ್ತಿದ್ದೆ ಎನ್ನುವುದು ಅಮೂಲ್ಯ ಮಾತು.

ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಬಂದಿರುವುದು ನನಗೆ ಖುಷಿಕೊಟ್ಟಿದೆ. ನಾನು ಪ್ರತಿ ಪರೀಕ್ಷೆಯನ್ನೂ ನನ್ನ ಬೆಸ್ಟ್‌ ಕೊಡಬೇಕು ಎನ್ನುವ ಮನೋಭಾವದಲ್ಲಿಯೇ ಬರೆಯುತ್ತಿದ್ದೆ. ಉತ್ತಮ ಅಂಕಗಳಿಕೆಗೆ ಇದು ನೆರವಾಯಿತು ಎಂದು ಹೇಳುತ್ತಾರೆ ಅಮೂಲ್ಯ.

ಈ ವರ್ಷ 2ನೇ ಪಿಯುಸಿ ಬರೆಯುವವರಿಗೆ ನಾನು ಹೇಳುವುದಿಷ್ಟೇ. ಸಿಲಬಸ್‌ನ ಸೀರಿಯಸ್‌ ಆಗಿ ತಗೊಳಿ. ಎಲ್ಲ ಚಾಪ್ಟರ್‌ಗಳನ್ನೂ ಪೂರ್ತಿಯಾಗಿ ಓದಿ. ಯಾವುದನ್ನೂ ಸ್ಕಿಪ್ ಮಾಡಬೇಡಿ. ಸಾಧ್ಯವಾದಷ್ಟು ಸಲ ರಿವಿಷನ್ ಮಾಡಿ. ಆಗ ಮಾತ್ರ ಮತ್ತು ಅಂಕ ಗಳಿಸಲು ಸಾಧ್ಯ ಎಂದು ಅಮಲ್ಯ ಕಿವಿಮಾತು ಹೇಳುತ್ತಾರೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS