ಪಂಜಾಬ್ ಕಿಂಗ್ಸ್ vs ಸನ್​ರೈಸರ್ಸ್ ಹೈದರಾಬಾದ್; ಯಾರು ಬಲಿಷ್ಠ?

By Prasanna Kumar P N
Apr 09, 2024

Hindustan Times
Kannada

ಏಪ್ರಿಲ್ 9ರಂದು 17ನೇ ಆವೃತ್ತಿಯ ಐಪಿಎಲ್​​ನ 23ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. 

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಪಂಜಾಬ್ ಮತ್ತು ಹೈದರಾಬಾದ್ ತಂಡಗಳು ಕಾದಾಟ ನಡೆಸಲಿವೆ.

ಪಿಬಿಕೆಎಸ್ ಮತ್ತು ಎಸ್​​ಆರ್​​ಹೆಚ್ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ಹೈದರಾಬಾದ್ ಮತ್ತು ಪಂಜಾಬ್ ತಂಡಗಳು ಐಪಿಎಲ್​ನಲ್ಲಿ 21 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ, ಎಸ್​ಆರ್​​ಹೆಚ್​ ತಂಡವೇ ಹೆಚ್ಚು ಮೇಲುಗೈ ಸಾಧಿಸಿದೆ.

ಈ ಪೈಕಿ 14 ಪಂದ್ಯಗಳಲ್ಲಿ ಸನ್​ರೈಸರ್ಸ್ ಹೈದರಾಬಾದ್ ಜಯಿಸಿದೆ. ಕೇವಲ 7ರಲ್ಲಿ ಮಾತ್ರ ಪಂಜಾಬ್ ಗೆದ್ದಿದೆ. 2023ರ ಐಪಿಎಲ್​ನಲ್ಲಿ ಮುಖಾಮುಖಿಯಾಗಿದ್ದ ಒಂದು ಪಂದ್ಯದಲ್ಲಿ ಹೈದರಾಬಾದ್ ಗೆದ್ದಿತ್ತು.

ಕೇಂದ್ರ ಬಜೆಟ್ 2024ರ ಹಿನ್ನೋಟ;  10 ಮುಖ್ಯ ಅಂಶಗಳು

ಕೇಂದ್ರ ಬಜೆಟ್ 2025

Photo Credits: PTI