ರಾಜಸ್ಥಾನ್ ರಾಯಲ್ಸ್ vs ಗುಜರಾತ್ ಟೈಟಾನ್ಸ್ ಮುಖಾಮುಖಿ ದಾಖಲೆ ಹೀಗಿದೆ

By Prasanna Kumar P N
Apr 10, 2024

Hindustan Times
Kannada

ಏಪ್ರಿಲ್ 10ರಂದು 17ನೇ ಆವೃತ್ತಿಯ ಐಪಿಎಲ್​​ನ 24ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. 

ಜೈಪುರದ ಸವಾಯಿ ಮಾನ್ಸಿಂಗ್​ ಕ್ರಿಕೆಟ್ ಮೈದಾನದಲ್ಲಿ ರಾಜಸ್ಥಾನ್ ಮತ್ತು ಗುಜರಾತ್ ತಂಡಗಳು ಕಾದಾಟ ನಡೆಸಲಿವೆ.

ಜಿಟಿ ಮತ್ತು ಆರ್​ಆರ್​ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.

ರಾಜಸ್ಥಾನ್ ಮತ್ತು ಗುಜರಾತ್ ತಂಡಗಳು ಐಪಿಎಲ್​ನಲ್ಲಿ 5 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಆದರೆ, ಜಿಟಿ ತಂಡವೇ ಅಧಿಕ ಪಂದ್ಯಗಳನ್ನು ಗೆದ್ದಿದೆ.

ಈ ಪೈಕಿ 4 ಪಂದ್ಯಗಳಲ್ಲಿ ಜಿಟಿ​ ಜಯಿಸಿದೆ. ಕೇವಲ 1ರಲ್ಲಿ ಮಾತ್ರ ಆರ್​​ಆರ್​​ ಗೆದ್ದಿದೆ. 2023ರ ಐಪಿಎಲ್​ನಲ್ಲಿ ಮುಖಾಮುಖಿಯಾಗಿದ್ದ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಗೆಲುವು ಸಾಧಿಸಿವೆ.

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್