ಡಾ. ರಾಜ್‌ಕುಮಾರ್ ನಟಿಸಿದ ಪರಭಾಷೆಯ ಸಿನಿಮಾ ಯಾವುದು ಗೊತ್ತೆ?
By Praveen Chandra B
Apr 24, 2025
Hindustan Times
Kannada
ಏಪ್ರಿಲ್ 24 ಕನ್ನಡ ನಟ ದಿವಂಗತ ರಾಜ್‌ಕುಮಾರ್ ಹುಟ್ಟುಹಬ್ಬ.
ರಾಜ್‌ಕುಮಾರ್ ಯಾವುದೇ ಪರಭಾಷೆ ಸಿನಿಮಾದಲ್ಲಿ ನಟಿಸಿಲ್ಲ ಎಂದು ಕೆಲವರು ತಿಳಿದುಕೊಂಡಿರಬಹುದು.
1954ರಲ್ಲಿ ಬಿಡುಗಡೆಯಾದ ‘ಬೇಡರ ಕಣ್ಣಪ್ಪ’ ಚಿತ್ರವು ಹಿಂದಿ ಮತ್ತು ತೆಲುಗಿಗೆ ರೀಮೇಕ್ ಆಗಿದ್ದಷ್ಟೇ ಅಲ್ಲ, ತಮಿಳಿಗೂ ಡಬ್ ಆಯಿತು.
ವಿಶೇಷವೆಂದರೆ, ತೆಲುಗಿನ ‘ಕಾಳಹಸ್ತಿ ಮಹಾತ್ಮ್ಯಂ’ ಚಿತ್ರದಲ್ಲೂ ಡಾ. ರಾಜಕುಮಾರ್ ನಟಿಸಿದ್ದಷ್ಟೇ ಅಲ್ಲ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು.
ಅವರು ಪರಭಾಷೆಯಲ್ಲಿ ನಟಿಸಿದ್ದು ಅದೊಂದೇ ಚಿತ್ರದಲ್ಲಿ. ‘ಕಾಳಹಸ್ತಿ ಮಹಾತ್ಮ್ಯಂ’ ಚಿತ್ರದ ನಂತರ ರಾಜಕುಮಾರ್ ಅವರು ಯಾವುದೇ ಪರಭಾಷೆಯ ಚಿತ್ರದಲ್ಲೂ ನಟಿಸಲಿಲ್ಲ ಎಂಬುದು ವಿಶೇಷ.
ಕಾಳಹಸ್ತಿ ಮಹಾತ್ಮ್ಯಂ ಎನ್ನುವುದು 1954ರ ತೆಲುಗು ಭಾಷೆಯ ಸಿನಿಮಾ. ಈ ಸಿನಿಮಾಕ್ಕೆ ಎಚ್.ಎಲ್.ಎನ್. ಸಿಂಹ ನಿರ್ದೇಶನವಿದೆ.
ಇದು ಮ್ಯೂಸಿಕಲ್ ಹಿಟ್ ಸಿನಿಮಾ. ಈ ಸಿನಿಮಾದಲ್ಲಿ ಸುಂದರ ಭಕ್ತಿಗೀತೆಗಳು ಇದ್ದವು. ಇದು 1954ರ ಕನ್ನಡ ಸಿನಿಮಾ ಬೇಡರ ಕಣ್ಣಪ್ಪದ ರಿಮೇಕ್ ಆಗಿದೆ.
ಪ್ರತಿಷ್ಠಿತ ಕಾನ್ ಸಿನಿಮೋತ್ಸವದಲ್ಲಿ ಮಿಂಚಿದ ʻಲಕ್ಷ್ಮೀ ನಿವಾಸʼ ಧಾರಾವಾಹಿಯ ಭಾವನಾ ಮೇಡಂ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ