ರಕ್ಷಾಬಂಧನದ ಖುಷಿ ಹೆಚ್ಚಿಸುವ ಮೆಹಂದಿ ಡಿಸೈನ್‌ಗಳಿವು 

By Reshma
Aug 16, 2024

Hindustan Times
Kannada

ಭಾರತದಲ್ಲಿ ವಿಶೇಷ ಸಂದರ್ಭಗಳಲ್ಲಿ ಮೆಹಂದಿ ಹಚ್ಚಿಕೊಳ್ಳುವುದು ಸಾಮಾನ್ಯ. ಹಬ್ಬಗಳೂ ಇದಕ್ಕೆ ಹೊರತಾಗಿಲ್ಲ. ಇದೀಗ ರಕ್ಷಾಬಂಧನ ಸಮೀಪದಲ್ಲಿದ್ದು, ರಾಖಿ ಹಬ್ಬಕ್ಕೆ ಸೂಕ್ತವಾದ ಮೆಹಂದಿ ಡಿಸೈನ್‌ಗಳು ಇಲ್ಲಿವೆ.  

ಸಹೋದರ–ಸಹೋದರಿಯರ ನಡುವಿನ ಸುಮಧುರ ಬಾಂಧವ್ಯ ಸೂಚಿಸುವ ಈ ವಿನ್ಯಾಸವನ್ನು ರಾಖಿ ಹಬ್ಬಕ್ಕೆ ನೀವು ಆಯ್ಕೆ ಮಾಡಿಕೊಳ್ಳಬಹುದು. 

ರಕ್ಷಾಬಂಧನಕ್ಕೆ ಹೊಂದುವಂತಹ ಡಿಸೈನ್‌ ಇದಾಗಿದ್ದು, ವಿಶೇಷವಾಗಿ ಕಾಣಿಸುತ್ತದೆ

ನಿಮ್ಮ ಅಂಗೈ ಮತ್ತು ಮಣಿಕಟ್ಟಿನ ಮೇಲೆ ಸಹೋದರರ ಹೆಸರು ಬರೆಸಿಕೊಳ್ಳಬಹುದು. 

ಅಂಗೈ ಮೇಲೆ ಅಣ್ಣ ತಂಗಿಗೆ ಸಿಹಿ ನೀಡುವ ಸುಂದರ ವಿನ್ಯಾಸವನ್ನು ಚಿತ್ರಿಸಬಹುದು

ಇದೊಂದು ಸುಂದರ ವಿನ್ಯಾಸವಾಗಿದ್ದು, ಇದರ ಜೊತೆ ಹ್ಯಾಪಿ ರಕ್ಷಾಬಂಧನ ಎಂದು ಬರೆಸಬಹುದು 

ಅರೆಬಿಕ್‌ ಮೆಹಂದಿ ಡಿಸೈನ್‌ಗೆ ಎಂದಿಗೂ ಬೇಡಿಕೆ ತಗ್ಗುವುದಿಲ್ಲ. ರಕ್ಷಾಬಂಧನಕ್ಕೆ ಈ ಡಿಸೈನ್‌ ಆಯ್ಕೆ ಮಾಡಿಕೊಳ್ಳಬಹುದು

ಸುಂದರವಾಗಿ ಕಾಣುವ ಈ ಸರಳ ಡಿಸೈನ್‌ ಕೂಡ ಖಂಡಿತ ನಿಮಗೆ ಇಷ್ಟವಾಗುತ್ತದೆ 

ಇದು ಏಳೇಳು ಜನುಮಗಳ ಅನುಬಂಧ, ಪತಿ-ಪತ್ನಿ ನಡುವೆ ಇರಲಿ ಪ್ರೀತಿ