ಮಕ್ಕಳಿಗೆ ಇಡಬಹುದಾದರ ರಾಮನ ಗುಣಗಳ ಹೆಸರುಗಳು

By HT Kannada Desk
Apr 17, 2024

Hindustan Times
Kannada

ಈಗಂತೂ ಪೋಷಕರು ತಮ್ಮ ಮಕ್ಕಳಿಗೆ ಬಹಳ ವಿಭಿನ್ನ ಹಾಗೂ ಅರ್ಥಪೂರ್ಣವಾದ ಹೆಸರುಗಳನ್ನು ಇಡಲು ಬಯಸುತ್ತಾರ

ಆಹಾನ್:‌ ಈ ಹೆಸರು ಸಂಸೃತದಿಂದ ಬಂದಿದೆ. ಆಹಾನ್‌ ಎಂಬ ಹೆಸರು ಬೆಳಗಿನ ಸೌಂದರ್ಯ ಹಾಗೂ ತಾಜಾತನವನ್ನು ಸಂಕೇತಿಸುತ್ತದೆ. ಭರವಸೆಯ ಹೊಸ ಆರಂಭ ಎನ್ನುವುದು ಇದರ ಅರ್ಥ.

PC: Pixaby

ಆರವ್‌: ಈ ಹೆಸರು ಶಾಂತಿ, ಪ್ರಶಾಂತತೆಯನ್ನು ಪ್ರತಿನಿಧಿಸುತ್ತದೆ. 

 ದಕ್ಷ್‌: ಈ ಹೆಸರು ಸಾಮರ್ಥ್ಯ ಹಾಗೂ ಪ್ರತಿಭೆಯನ್ನು ಸೂಚಿಸುತ್ತದೆ. ಯೋಧ ಮತ್ತು ನಾಯಕನಾಗಿ ಭಗವಾನ್‌ ರಾಮನ ಗುಣಗಳನ್ನು ಪ್ರತಿಬಿಂಬಿಸುತ್ತದೆ. 

ದಿವಿತ್‌: ಈ ಹೆಸರು ಅಮರತ್ವ, ಶಾಶ್ವತತೆಯನ್ನು ಸಂಕೇತಿಸುತ್ತದೆ. ಜೀವನ ಹಾಗೂ ಆತ್ಮದ ಸಾರವನ್ನು ಪ್ರತಿನಿಧಿಸುತ್ತದೆ

ಹ್ರಿಹಾನ್: ಈ ಹೆಸರು ದೇವರೊಂದಿಗಿನ ವಿಶೇಷ ಸಂಪರ್ಕವನ್ನು ಸೂಚಿಸುತ್ತದೆ. ಬ್ರಹ್ಮಾಂಡದ ರಕ್ಷಕನಾದ ವಿಷ್ಣುವಿನ ಅವತಾರವಾದ ಭಗವಾನ್‌ ಶ್ರೀರಾಮನ ಪಾತ್ರವನ್ನು ಪ್ರತಿನಿಧಿಸುತ್ತದೆ. 

ಕೈರವ್‌; ಇದು ಶುದ್ಧತೆಗೆ ಸಂಬಂಧಿಸಿದೆ. ಯಾವುದೇ ಆಕಾರಕ್ಕೆ ತನ್ನನ್ನು ತಾನೇ ರೂಪಿಸಿಕೊಳ್ಳುವ ನೀರಿನ ಸಾಮರ್ಥ್ಯದಂತೆ ವಿವಿಧ ಸಂದರ್ಭಗಳಲ್ಲಿ ಭಗವಾನ್‌ ರಾಮನ ಗುಣಗಳನ್ನು ಸೂಚಿಸುತ್ತದೆ. 

ಕೀಯಾನ್:‌ ನಾಯಕತ್ವದ ಗುಣಗಳನ್ನು ಸಾರುವ ಹೆಸರು ಇದು. ಅಧಿಕಾರ ಹಾಗೂ ಶಕ್ತಿಯನ್ನು ಸೂಚಿಸುತ್ತದೆ. 

ಮಾನ್ವಿಕ್‌: ಬುದ್ಧಿವಂತಿಕೆಯನ್ನು ಸಹಾನುಭೂತಿಯೊಂದಿಗೆ ಸಂಯೋಜಿಸುವ ಅರ್ಥ ನೀಡುವ ಹೆಸರು ಇದು. 

ಮಾವಿನಹಣ್ಣಿನಿಂದ ತಯಾರಿಸಬಹುದಾದ 7 ವಿಶೇಷ ಖಾದ್ಯಗಳಿವು